Skip to content Skip to footer

Birth of DasaSahitya | ದಾಸಸಾಹಿತ್ಯದ ಉಗಮ

 

Change Language  english 
ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳ ಸಮೃದ್ಧ ಹುರಿದ ಕಾಲುವೆ.

ಭಕ್ತಿಯ ಆಳದಿಂದ ಹುಟ್ಟಿದ್ದು.

ಭಾರತೀಯರ ನಿಜವಾದ ಸಂಪತ್ತು ವೇದಗಳು. ಇವುಗಳಲ್ಲಿ ಹೇಳದವಿಷಯವಿಲ್ಲ. ಸೃಷ್ಠಿರಹಸ್ಯದಿಂದ ಹಿಡಿದು ಮಾನವ ಜೀವನದ ಉನ್ನತಿಗೆ ಬೇಕಾಗುವ ಸಕಲಸಾಧನ ಪ್ರಕ್ರಿಯೆಗಳು ಇಲ್ಲಿ ಹೇಳಲ್ಪಟ್ಟಿದೆ.

ನಮ್ಮ ಸಂಪತ್ತು ವೇದಗಳಲ್ಲಿ ಹೇಳದಂತಹ ವಿಷಯಗಳಿವೆ. ಇವುಗಳಲ್ಲಿ ಸೃಷ್ಟಿಯ ರಹಸ್ಯದಿಂದ ಹಿಡಿದು ಮಾನವ ಜೀವನದ ಉನ್ನತಿಗೆ ಬೇಕಾದ ಎಲ್ಲಾ ಸಾಧನೆಗಳು ಇಲ್ಲಿ ಹೇಳಲ್ಪಟ್ಟಿವೆ.

rayaru
moolarama

ಭಕ್ತಿಯ ಮಾರ್ಗಗಳನ್ನು ಬೆಳಗುತ್ತಿದೆದೈವೀ ದೃಷ್ಟಿ

ಸ್ಕೃತಿ-ಹುರಾಣ-ತಂತ್ರ-ಪೂರ್ವಮೀಮಾಂಸ- ಉತ್ತರಮೀಮಾಂಸಾದಿ ಶಾಸ್ತ್ರಗಳು ಈ ವೇದವಾಗಜ್ಮಯದ ಸುಲಭ ವಿವರಣೆಗಳು. ಇವುಗಳಿಗೆ ವ್ಯಾಖ್ಯಾನಗಳು ಅನೇಕ ಆಚಾರ್ಯರಿಂದ ರಚಿತಗಳಾದ ಭಾಷ್ಯ-ಟೀಕ-ಟಿಪ್ಪಣೆಗಲು. ವೈದಿಕ-ಲೌಕಿಕ ಸಂಸ್ಕೃತಭಾಷೆಯಿಂದ ಕೂಡಿದ ಭಾರತೀಯರ ಆಧ್ಯಾತ್ಮಿಕ ವಾಗಜ್ಮವನ್ನು ಸಾಮಾನ್ಯವಾಗಿ ಮೂರು ವಿಧದಲ್ಲಿ ವಿಂಗಡಿಸಬಹುದು.

1) ವೇದವಾಗಜ್ಮಯ 2) ವ್ಯಾಸವಾಗಜ್ಮಯ 3) ದಾಸವಾಗಜ್ಮಯ.

ವೈದಿಕ-ಸಂಸ್ಕೃತ ಭಾಷೆಯಲ್ಲಿರುವ ಅಪೌರುಶೇಯರೆಂದು ಪ್ರಸಿದ್ಧವಾದ ಶೃತಿಯು ವೇದವಾಗಜ್ಮಯವಾಗಿದೆ. ಶ್ರೀಮನ್ನಾರಾಯಣನೇ ವೇದವ್ಯಾಸರೂಪದಿಂದ ಅವತರಿಸಿ ವೇದಗಳನ್ನು ವಿಭಾಗಿಸಿದನು. ವೇದಾರ್ಥ ನಿರ್ಣಾಯಕಗಳಾದ ಹದಿನೆಂಟು ಪುರಾಣಗಳನ್ನು ಭಾರತವನ್ನು ಬ್ರಹ್ಮಸೂತ್ರಗಳನ್ನು ರಚಿಸಿದನು. ಇವೆಲ್ಲವು ವ್ಯಾಸವಾಜ್ಮಯಗಳು. (ವ್ಯಾಸಸಾಹಿತ್ಯ)

ವೈದಿಕ ಮತಾಚಾರ್ಯರೆಲ್ಲರೂ ಭಕ್ತಿತತ್ತ್ವವನ್ನು ಅಂಗೀಕರಿಸಿದವರು. ಇದರಿಂದಾಗಿ ಪರಬ್ರಹ್ಮನಿಗೆ ಈಶತ್ವವನ್ನು  ಜೀವನಿಗೆ ದಾಸತ್ವವನ್ನು ಯಾವುದೋ ಒಂದು ಸ್ಥಿತಿಯಲ್ಲಿ ಅಂಗೀಕರಿಸಬೇಕಾಗುವುದು. ಭಕ್ತಿಯ ಭಾವದಿಂದ ಭಾಗಿ ದಾಸಸತ್ವವನ್ನಂಗೀಕರಿಸಿದ ಎಲ್ಲಾ ಆಚಾರ್ಯರ, ಖುಷಿಗಳ ಜ್ಞಾನಿಗಳ ವಾಜ್ಮಯವೆಲ್ಲವು ದಾಸವಾಜ್ಕಯವಾಗುವುದು.

ವೇದವಾಗಜ್ಮಯ

ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳ ಸಮೃದ್ಧ ಬುದ್ಧಿವಂತಿಕೆಯು, ವೇದಗಳ ಆಳವಾದ ಬೋಧನೆಗಳ ಸಂಗ್ರಹವಾಗಿದೆ. ಇದು ವೈದಿಕ ಆದರ್ಶಗಳ ಸಾರವನ್ನು ಹೊಂದಿರುವುದರಿಂದ, ಕಾಲಾತೀತ ಸತ್ಯಗಳ ಸಂಕೀರ್ಣ ಭಂಡಾರವಾಗಿದೆ.

ವ್ಯಾಸವಾಗಜ್ಮಯ

ವ್ಯಾಸವಾಂಗ್ಮಯವು ವ್ಯಾಸರು ನೀಡಿದ ಜ್ಞಾನದ ಸಮಗ್ರತೆಯನ್ನು ಪ್ರತಿನಿಧಿಸುತ್ತದೆ. ಇದು ತಾತ್ವಿಕ, ನೈತಿಕ, ಮತ್ತು ಆಧ್ಯಾತ್ಮಿಕ ಒಳನೋಟಗಳ ವ್ಯಾಪಕ ಶ್ರೇಣಿಯನ್ನು ಒಳಗೊಂಡಿದೆ.

ದಾಸವಾಗಜ್ಮಯ

ದಾಸ ವಾಂಗ್ಮಯ ಪ್ರಮುಖವಾಗಿ ಕನ್ನಡದಲ್ಲಿ ಹೊರಬಂದ ಭಕ್ತಿ ಮತ್ತು ತಾತ್ವಿಕ ಲೇಖನಗಳನ್ನು ಒಳಗೊಂಡಿದೆ. ಇದು ಆಧ್ಯಾತ್ಮಿಕ ಬುದ್ಧಿವಂತಿಕೆಯ ಹದಿಮೂರು ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ, ದೈವಿಕ ಪ್ರೀತಿ ಮತ್ತು ಮುಕ್ತಿಯ ಮಾರ್ಗದ ವಿಶ್ವಾಸವನ್ನು ಪ್ರಕಟಿಸುತ್ತದೆ.