Skip to content Skip to footer

Division of topics | ದಾಸಸಾಹಿತ್ಯದಲ್ಲಿ ವಿಷಯಗಳ ವಿಭಾಗ

 

Change Language  english 
Dasasahitya Literature

Comprehensive Overview

ದಾಸಸಾಹಿತ್ಯ ಅಪೂರ್ವ ಸಾಹಿತ್ಯ. ವೇದಗಳ ನಿಜಾರ್ಥವನ್ನು ತಿಳಿಯ ಹೇಳಲು ಹೊರಹೊರಟ ಸ್ಮತಿ- ಷುರಾಣ. ಧರ್ಮಶಾಸ್ತ್ರ ತಂತ್ರಶಾಸ್ತ್ರ ವೇದಾಂತಗ್ರಂಧಗಳ ಅಪೂರ್ವ ರಹಸ್ಯ ವಿಷಯಗಳನ್ನು ಜನ ಸಾಮಾನ್ಯಕ್ಕೆ ಸುಲಲಿತವಾಗಿ ಕನ್ನಡ ಭಾಷೆಯಲ್ಲಿ ದೊರೆಯುವಂತೆ ಮಾಡಿದ ಘನತೆ ಈ ಕನ್ನಡ ಹರಿದಾಸಸಾಹಿತ್ಯಕ್ಕೆ ಮೀಸಲಾದುದು.


ಉಪನಿಷತ್ತುಗಳಳ, ಪುರಾಣಗಳ ವರರಹಸ್ಯಗಳನ್ನು ತಿಳಿಹೇಳುವಲ್ಲಿ ಹರಿದಾಸರ ಪ್ರಯತ್ನ ಪೂರ್ಣಫಲಕಾರಿಯಾಗಿದೆ. ಹರಿದಾಸರ ಕೃತಿಗಳು ಉಪನಿಷತ್ತುಗಳ ಭಾಷಾ೦ತರಗಳು ಎಂದಲ್ಲಿ ತಪ್ಪಾಗಲಾರದು.

dva imau

 ಹರಿದಾಸರು ತಮ್ಮ ಕೃತಿಗಳಲ್ಲಿ ಒಂದು ಉಪನಿಷತ್ತನ್ನೋ ಅಥವಾ ಉಪನಿಷತ್ತಿನಭಾಗವನ್ನು ಪೂರ್ಣವಾಗಿ ಅನುಸರಿಸಿರುವುದನ್ನು ಕಾಣಬಹುದು.

“ದ್ವಾಸುಪರ್ಣಸಯುಜಾಸಖಾಯೌ” ಎಂಬ ಶೃತಿಯನ್ನು ಪುರಂದರದಾಸರು ತಮ್ಮ “ಜಯವದೆಜಯವದೆ ಈಮನೆತನಕೆ ಬಿಡುಬಿಡುಬಿಡುಬಿಡು ಮನಸಂಶಯವ” ಎಂಬ ಜಾನಪದ ಶೈಲಿಯ ಹಾಡಿನಲ್ಲಿ ಪೂರ್ಣವಾಗಿ ಅನುವಾದಿಸಿರುವರು.

ದಾಸರು ಜಾನಪದ ಶೈಲಿಯಲ್ಲಿ ಶೃತಿ ರಹಸ್ಯವನ್ನು ಹೇಳಿ ಶ್ರೀಸಾಮಾನ್ಯರಿಗು ಶೃತ್ಯರ್ಥವನ್ನು ತಿಳಿಸಿರುವರು. ಒಳ್ಳೆ
ಶಬ್ಧಾಡಂಬರದಲ್ಲಿ ಸಂಗೀತ ಶೈಲಿಯಲ್ಲಿ ದಾಸರು ಈ ಕೃತಿಯನ್ನು ರಚಿಸಿದ್ದರೇ ಅದು ಕೇವಲ ಸಂಗೀತಗಾರರ ಪಂಡಿತರ ಸ್ಫೋತ್ರಾಗುತಿತ್ತು.

ಒಟ್ಟಿನಲ್ಲಿ ಹರಿದಾಸರು ಸೃಷ್‌ಒಇರಹಸ್ಯದಿಂದ ಹಿಡಿದು ಲೋಕನೀತಿಯವರೆಗಿರುವ ಎಲ್ಲಾ ವಿಷಯಗಳನ್ನು ತಮ್ಮ ಕೃತಿಗಳಲ್ಲಿ ಹೇಳಿರುವಂತೆ ಹರಿದಾಸರು ಹೇಳಿದ ವಿಷಯಗಳಲ್ಲ ಎಂದಲ್ಲಿ ತಪ್ಪಾಗಲಾರದು. ತೆಲುಗು, ತಮಿಳು ವಾಗ್ಗೇಯಕಾರರ ಸಾಹಿತ್ಯದಲ್ಲಿ ಈ ವೈಭವವನ್ನು ವಿಷಯಪ್ರತಿಪಾದನ ವೈಶಾಲ್ಯವನ್ನು ಕಾಣಲು ಸಾಧ್ಯವೇಯಿಲ್ಲ.

ಎಲ್ಲಾ ಪ್ರಾಂತದ ವಾಗ್ಗೇಯಕಾರರು ಜ್ಞಾನಿಗಳೇ. ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸದವರೆ. ಶೃತಿ-ಸ್ಮೃತಿ-ಪುರಾಣ ತಂತ್ರಶಾಸ್ತ್ರಗಳ ಆಳಕ್ಕೆ ಮಾತ್ರ ಓದವರಲ್ಲ. ವೈದಿಕ, ಲೌಕಿಕ ಸಂಸ್ಕೃತ ಭಾಷೆಯಲ್ಲಿ ನಿಗೂಢವಾಗಿದ್ದ ಆಧ್ಯಾತ್ಮ ಪ್ರಪಂಚವನ್ನು ಶ್ರೀಸಾಮಾನ್ಯರ ಜ್ಞಾನಾ೦ಗಳಕ್ಕೆ ಒಯ್ದ ಪುಣ್ಯಾತ್ಮರುಹರಿದಾಸರು.

ವಿಭಾಗಗಳು

ದಾಸರಸಾಹಿತ್ಯದಲ್ಲಿ ಕಾಣುವ ವಿಭಾಗಗಳು

  1. 1) ಸಮಗಸೃಷ್ಠಿ ರಹಸ್ಯಕ್ಕೆ ಸಂಬಂಧಿಸಿದ ಕೃತಿಗಳು
    2) ಉಪನಿಷದರ್ಥ ಪ್ರತಿಪಾದಕ ಕೃತಿಗಳು
    3) ಪುರಾಣ ಕಥಾನಿರೂಪಣ ಕೃತಿಗಳು
    4) ತ್ರಂತ್ರಗಥದ ವಿಷಯ ನಿರೂಪಣ ಕೃತಿಗಳು

    (ಚಕ್ರಾಬ್ಬಮಂಡಲ, ಪೂಜಾಪದ್ಧತಿ, ಮಂತ್ರಗಳಸ್ವರೂಪ, ಓಂಕಾರ ವೈಭವ ಮುಂತಾದವುಗಳು)
    5) ಉಪಾಸನ ವಿಷಯಕ ಕೃತಿಗಳು
    6) ಪ್ರಮೇಯ ವಿಷಯಕ ಕೃತಿಗಳು
    7) ಸಾಧನಾಭಾಗ ವಿಷಯಕ ಕೃತಿಗಳು
    8) ತೀರ್ಥಕ್ಷೇತ್ರ ವಿಷಯಕ ಕೃತಿಗಳು
    9) ಶ್ರೀನಿವಾಸನ ಸ್ತೋತ್ರಾತ್ಮಕ ಕೃತಿಗಳು
    10) ಕೃಷ್ಣ ಕಥಾ ಸ್ತೋತ್ರಾತ್ಕಕ ಕೃತಿಗಳು
    11) ರಾಮ ಸ್ತೋತ್ರಾತ್ಕಕ ಕೃತಿಗಳು
    12) ಹರಿಯ ದಶಾವತಾರ ಸ್ತೋತ್ರಾತ್ಮಕ ಕೃತಿಗಳು
    13) ನರಸಿಂಹ ಸ್ತೋತ್ರಾತ್ಕಕ ಕೃತಿಗಳು
    14) ಹಯಗ್ರೀವಾದಿ ಭಗವದವತಾರಗಳ ಸ್ತೋತ್ರಾತ್ಕಕ ಕೃತಿಗಳು
    15) ಮಹಾಲಕ್ಷ್ಮ್ಮೀಸ್ತೋತ್ರಾತ್ಕಕ ಕೃತಿಗಳು
    16) ಹನುಮಂತದೇವರ ( ವಾಯುದೇವರ) ಸ್ತೋತ್ರಾತ್ಮಕ ಕೃತಿಗಳು
    17) ರುದ್ರದೇವರ ಸ್ತೋತ್ರಾತ್ಮಕ ಕೃತಿಗಳು
    18) ಇತರ ದೇವತಾ ಸ್ತೋತ್ರಾತ್ಮಕ ಕೃತಿಗಳು
    19) ರಾಘವೇ೦ಂದ್ರಗುರುಗಳ ಸ್ತೋತ್ರಾತ್ಮಕ ಕೃತಿಗಳು
    20) ಇತರ ಗುರುಗಳ ಸ್ತೋತ್ರಾತ್ಮಕ ಕೃತಿಗಳು
    21) ಹರಿದಾಸರ ಸ್ತೋತ್ರಾತ್ಮಕ ಕೃತಿಗಳು
    22) ದುರ್ಜನ ಸಂಘ ವಿಷಯಕ ಕೃತಿಗಳು
    23) ಸಜ್ಜನರ ಸಂಘ ವಿಷಯಕ ಕೃತಿಗಳು
    24) ಹರಿನಾಮ ಮಹಿಮಾವರ್ಣನ ಕೃತಿಗಳು
    25) ಕಲಿಯುಗ ಮಹಿಮಾವರ್ಣನ ಕೃತಿಗಳು
    26) ಲೋಕನೀತಿ ವಿಷಯದ ಕೃತಿಗಳು
    27) ತೀರತಮ್ಯ ಪ್ರತಿಪಾದಕ ಕೃತಿಗಳು
    28) ನಳಚರಿತೆ ಶಂಕುತಲೋಪಾಖ್ಯಾನಾದಿ ಬಹುತ್ಯುತಿಗಳು (ಖಂಡಕಾವ್ಯಗಳು)
    29) ಖಕ್ಕಾಂಗದ ಚರ್ರ ಮುಂತಾದ ಬಯಲು ನಾಟಕಗಳು

ಹರಿಕಥಮಾರುತಸಾರ:

ಜಗನ್ನಾಥದಾಸರ “ಹರಿಕಥಾಮೃತಸಾರ” ದಾಸ ಸಾಹಿತ್ಯವನ್ನು ಸಾರುತ್ತದೆ, ಆಚಾರ್ಯ ಮಧ್ವರ ಬೋಧನೆಗಳಿಗೆ ಕನ್ನಡದ ಸಾಹಿತ್ಯದ ಶಿಖರವನ್ನು ಒಳಗೊಂಡಿದೆ. ಇದು ಕನ್ನಡ ಸಾಹಿತ್ಯದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದೆ, ಹಲವಾರು ವ್ಯಾಖ್ಯಾನಗಳು ಅದರ ಆಳವನ್ನು ಪುಷ್ಟೀಕರಿಸುತ್ತವೆ. ಸಂಕರ್ಷಣ ಒಡೆಯರ್ ಮತ್ತು ಗುರು ವಿಜಯದಾಸರಂತಹ ಗಮನಾರ್ಹ ವ್ಯಾಖ್ಯಾನಕಾರರು ಒಳನೋಟಗಳನ್ನು ಒದಗಿಸುತ್ತಾರೆ. ಸಂಸ್ಕೃತದಲ್ಲಿ ಮಂದಬೋಧಿನಿಯ ಸರಳೀಕೃತ ಪದ್ಯ ವ್ಯಾಖ್ಯಾನಗಳು ಮತ್ತು ಗುರು ಜಗನ್ನಾಥದಾಸರಿಂದ “ಪರಿಮಳ” ಅದರ ಬೋಧನೆಗಳನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ. ಜಗನ್ನಾಥದಾಸರ ಜೀವನ ಮತ್ತು ಉಲ್ಲೇಖಿತ ಅವತಾರಗಳನ್ನು ಚಿತ್ರಿಸುವ ಚಿತ್ರಗಳೊಂದಿಗೆ ಪೂರಕವಾದ ಕೃತಿಯನ್ನು ಆನ್‌ಲೈನ್‌ನಲ್ಲಿ ಪ್ರವೇಶಿಸಬಹುದು. ಪ್ರತಿ ಹದಿನೈದು ದಿನಗಳಿಗೊಮ್ಮೆ ಬಿಡುಗಡೆಯಾದ ಸಂಕ್ಷಿಪ್ತ ಪ್ರಶ್ನೆಗಳು ಮತ್ತು ಉತ್ತರಗಳ ನಿಯಮಿತ ಸೆಟ್ ಅದರ ಸಾರವನ್ನು ಒಳಗೊಂಡಿರುತ್ತದೆ. ಹೀಗಾಗಿ, ಈ ಕೊಡುಗೆಯು ಆಧ್ಯಾತ್ಮಿಕ ಒಳನೋಟದ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ, ಭಾಷಾ ಮತ್ತು ಸಾಂಸ್ಕೃತಿಕ ಗಡಿಗಳಲ್ಲಿ ಪ್ರತಿಧ್ವನಿಸುತ್ತದೆ.

 ಕಿರ್ತನೆಗಳು

ಕೀರ್ತನೆಗಳ ರಚನ ಹರಿದಾಸಸಾಹಿತ್ಯದಲ್ಲಿ ವಿಷುಲವಾಗಿದ ದಾಸಸಾಹಿತ್ಯದಲ್ಲಿ ಸಾವಿರಸಾವಿರ ಸಂಖೆಯಲ್ಲಿ ಕೀರ್ತನೆಗಳು ರಚಿತವಾಗಿವೆ. ಕೀರ್ತನೆಗಳಿಗೆ ಸ್ಪಷ್ಟವಾದ ಲಕ್ಷಣವಿದೆ. ಪ್ರಧಾನವಾಗಿ ಕೀರ್ತನೆ, ರಾಗ,ತಾಳ ಬದ್ಧವಾಗಿರುತ್ತದಎ. ಕೀರ್ತನಯ ಪ್ರರಂಭವು ಪಲ್ಲವಿ ಅನುಫ್ಷವಿಗಳಿಂದ ಕೂಡಿರುತ್ತಿದೆ. ಆದರೆ ಇದುಕ್ಹಾಯವಲ್ಲ. ವಿಮರ್ಶಕರ ಹೇಳಿಕೆಯಂತೆ ಪುರಂದರ ದಾಸರ ಕಾಲದಲ್ಲಿ ಪಲ್ಲವಿ ಮಾತ್ರಿ ಜ್ತು, ಅನುಪಲ್ಲವಿ ಇರಲ್ಲಿ ಎಂದು, ಕೆಲರ್ಕಿನೆಗಳ ಆದಿಯಲ್ಲಿ ಪಲ್ಲವಿ ಇರುತ್ತದೆ ಅನುಪಲ್ಲವಿ ಇರುವುದಿಲ್ಲ, ಉದಾಹರಣೆಗೆ ಹೇಳುವುದಾದಲ್ಲಿ “ದಾಸನ್ನ ಮಾಡಿಕೊ” ಎಂಬ ಪುರಂದರದಾಸರ ಪ್ರಶ್ನ ಕೀರ್ತನೆಯಲ್ಲಿ ಪಲ್ಲವಿ ಮಾತ್ರವಿದೆ. ಇದರಂತೆ ಅವರದೀ ಎಂದು ಪ್ರಸಿದ್ಧವಾದ “ಶ್ರೀನಿವಾಸ ನೀನೇ ಪಾಲಿಸೋ” ಎಂಬ ಕೀರ್ತನೆಯಲ್ಲಿ ಪಲ್ಲವಿ ಅನುಪಲ್ಲವಿಗಳೆರಡೂ ಇವೆ.

ಶ್ರೀನಿವಾಸ ನೀನೇ ಪಾಲಿಸೋ ತಜನಪಾಲ

ಗಾನ ಲೋಲ ಶ್ರೀ ಮುಕುಂದನೆ ॥ಪ॥

ಧಾನದೊಳು ಸಜ್ಜನರ ಮಾನದಿಂ ಪರಿಪಾಲಿಪ

ವೇಣುಗೇಪಾಲಗೇವಿಂದ ವೇದವೇದ್ಯ ನಿತ್ಯಾನಂದ ॥ ಅ.ಪ ॥

ಇನ್ನು ಕೀರ್ತನೆಗಳಲ್ಲಿ ಚರಣಗಳು ಬೆಸಸಂಖೆಯ್ದರುತ್ತವೆ. ಪ್ರಾಚೀನ ರ್ತನೆಗಳಲ್ಲಿ 3,5 ಅಥವಾ 7 ಚರಣಗಳಿರುತ್ತವೆ. ಈ ಚರಣಗಳಾದರೂ 2,3,4,5 ಪಾದಗಳಿಂದ ಕೂಡಿದ್ದ ಪ್ರತಳಪಾದದ ಪ್ರಾರಂಭದ ಎರಡನೇ ಅಕ್ಷರವು ಸಮಾನವಾಗಿದ್ದು ಆದಿಪ್ರಾಸದೊಟ್ಟಿಗೆ ಅಂತ್ಯಪ್ರಾಸವನ್ನು ಸಹ ಕಾಣಬಹುದು. ಪಾದಗಳ ಸಮಾನ ಲಕ್ಷಣಗಳಿಂದ ಕೂಡಿರುತ್ತದೆ. ಪಲ್ಲವಿಯು ಸೂತ್ರದಂತಾದರೆ ಅನುಪಲ್ಲವಿಯು ಪಲ್ಲವಿಯ ಭಾಷ್ಯವಿದ್ಧಂತೆ ಪಾಠಗಳ ಪಲ್ಲವಿ, ಅನುಪಲ್ಲವಿಗಳ ಟೀಕಾ ಟಿಪ್ಪಣಿಗಳಿದ್ದಂತೆ.

ದಾಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲಾ ಕೀತನೆಗಳನ್ನು ಶುದ್ಧಪಾಠದೊಟ್ಟಿಗೂ, ವಿಶದ ಖ್ಯಾನದೊಟ್ಟಿಗೂ ವೆಬ್‌ಸೈಟ್‌ನಲ್ಲಿ ಹೊರತರಲಾಗುವುದು.

ಸುಳಾದಿಗಳು

ಸುಳಾದಿಗಳು ಹರಿದಾಸರ ಅಪೂರ್ವ ಕೊಡುಗೆ. ಸುಳಾದಿಗಳ ನಿರ್ಮಾಣದ ಕ್ರಾಂತಿಶ್ರೀಪಾದರಾಜರಿಂದ ಪ್ರಾರಂಭವಾಗಿದೆ. ತಾಳ-ರಾಗಬದ್ಧವಾಗಿ ರಚನಾಪದ್ಧತಿಗೆ ಒ೦ದು ಲಕ್ಷಣವನ್ನ ಕೊಟ್ಟು ಸುಳಾದಿಗಳ ರಚನೆಗೆ ಶ್ರೀಕಾರ ಹಾಕಿದ ಮಹಿತಾತ್ಮರು. ಕರ್ನಾಟಕ ಹರಿದಾಸರು ಕಿರ್ತನೆಯಲ್ಲಿ ಪಲ್ಲವಿ, ಅನುಪಲ್ಲವಿ ಬೆಸಸಂಖೆಯ ಚರಣಗಳಿರುತ್ತವೆ. ಚರಣಗಳು ಆದಿಪ್ರಾಸದಿಂದ ಸಹಿತವಾಗಿ ನಿಯಮಿತವಾದ ಪಾದಗಳಿಂದ ಕೂಡಿರುತ್ತವೆ. ಮೊದಲಾನೆ ಚರಣದಲ್ಲಿ 4 ಪಾದಗಳಿದ್ದರೆ ಮುಂದಿನ ಚರಣಗಳಲ್ಲೂ 4-4 ಪಾದಗಳೇ ಇರುತ್ತವೆ. ಇದು ಕಡ್ಡಾಯ. ಸುಳಾದಿಗೆ ಈನಿಯಮವಿಲ್ಲ. ಸುಳಾದಿಯಲ್ಲಿ ಪ್ರಾರಂಭದಲ್ಲಿ ಪಲ್ಲವಿ ಅನುಪಲ್ಲವಿಗಳಿರುವುದಿಲ್ಲ ಅದಕ್ಕೆ ಬದಲಾಗಿ ಸುಳಾದಿಯ ಕೊನೆಯಲ್ಲಿ ಎರಡು ಪಾದಗಳಿಂದ ಕೂಡಿದ, ಪಲ್ಲವಿಯಂತೆ ಇರುವ `ಜತೆ’ ಎಂಬ ಒಂದು ರಚನೆ ಇರುತ್ತದೆ. ಸುಳಾದಿಗಳಲ್ಲಿ ಆದಿ ಪ್ರಾಸ ಅತ್ಯಾವಶ್ಯಕ. ಸುಳಾದಿಗಳಲ್ಲಿ ಚರಣಗಳು ಬೆಸಸಂಖೆಯಲ್ಲೇ ಇರುತ್ತವೆ. ಆದರೆ ಈ ಚರಣಗಳಲ್ಲಿ ಪಾದಗಳ ನಿಯಮವಿಲ್ಲ ಒಂದು ಚರಣದಲ್ಲಿ ಎಷ್ಟಾದರೂ ಪಾದಗರಬಹುದು. ಕೆಲಕೆಲ ಸುಳಾದಿಗಳ ಚರಣಗಳಲ್ಲಿ 20,25 ಪಾದಗಳಿರುತ್ತವೆ. ಇದಕ್ಕೆ ಕಾರಣ ದಾಸರು ತಾವು ಹೇಳಬೇಕೆಂದು ಕೊ೦ಡ ವಿಷಯವನ್ನು ಸಮಗ್ರವಾಗಿ , ವಿಸ್ತಾರವಾಗಿ ಹೇಳಬೇಕೆಂಬುದೇ ಆಗಿರುತ್ತದೆ.

ಇಂದು ಸುಳಾದಿಗಳ ಗಾನ ಕೇವಲ ತಾಳಪ್ರಾಧಾನ್ಯವನ್ನು ಮಾತ್ರ ಪಡೆದಿದೆ. ಹಳೆಹಸ್ತಪ್ರತಿಗಳಲ್ಲಿ ಪ್ರತಿ ಸುಳಾದಿಯ ಮೇಲೆ ರಾಗದ ಸೂಚನೆ ಇದೆ. ದಾಸಸಾಹಿತ್ಯದಲ್ಲಿ ಸುಳಾದಿಗಳ ಸಂಪತ್ತು ಹೇರಳವಾಗಿದೆ. ಈ ಸುಳಾದಿಗಳನ್ನು ವಿಷಯವಿಭಾಗಕ್ಕನುಗುಣವಾಗಿ ಶುದ್ಧಪಾಠದೊಟ್ಟಿಗೆ ವಿಶಯದ ವ್ಯಾಖ್ಯಾನದೊಟ್ಟಿಗೆ ವೆಬ್‌ಸೈಟ್‌ನಲ್ಲಿ ಕರವಾಗುವುದು.

ಉಗಾಭೋಗಗಳು

ಈ ಉಗಾಭೋಗಗಳು ಸಹ ಹರಿದಾಸರ ಹೊಸಸೃಷ್‌ಒಇಯೆ. ಆದರೆ ಇವುಗಳ ರಚನೆಗೆ ಶಿವಶರಣರ ವಚನಗಳು ಸ್ಫೂರ್ತಿಯಾಗಿದೆ. ಉಗಾ ಭೋಗಗಳಲ್ಲಿ ದ್ವಿತೀಯಕ್ಷರ ಪ್ರಾಸ ಮಾತ್ರ ನಿಶ್ಚಿತವಾಗಿ ಇರುತ್ತದೆ. ಇದರಲ್ಲಿ ಪಾದಗಳಿದೆ ನಿಯಮವಿಲ್ಲ, ಕೆಲ ಉಗಾಭೋಗಗಳು 3,4,5,6 7 ಪಾದಗಳಿಂದ ಕೂಡಿರುತ್ತವೆ. ಉಗಾಭೋಗಗಳಿಗೆ ದಾಸರ ರಾಗ, ತಾಳಗಳನ್ನು
ಹೇಳಿಲ್ಲ. ಐಚ್ಛಿಕವಾದ ರಾಗದಲ್ಲಿ ಇವುಗಳನ್ನು ಹೇಳಬಹುದು. ಅಂದು 800ಕ್ಕೂ ಹೆಚ್ಚಾಗಿ ಉಗಾಭೋಗಗಳು ಉಪಲಬ್ಧವಿದೆ. ಈ ಉಗಾಭೋಗಗಳನ್ನು ಶುದ್ಧ ಪಾಠದೊಟ್ಟಿಗೆ,
ಅರ್ಥವಿವರಣೆದೊಟ್ಟಿಗೆ ವೆಬ್‌ಸೈಟ್‌ನಲ್ಲಿ ಕರವಾಗುವುದು.

ಬಯಲಾಟಗಳು

ಬಯಲಾಟಗಳು ದೃಶ್ಯರೂಪಗಳು, ಪ್ರಾಯ, ಬಯಲಾಟಗಳು ಯಕ್ಷಗಾನ ಪ್ರತಿಬಿಂಬಗಳು, ಗದ್ಯ -ಪದ್ಯ-ವಚನ- ಕೀರ್ತನೆಗಳಿಂದ ಯುಕ್ತವಾದ ಈ ಬಯಲಾಟಗಳು ತಾಳಬದ್ಧವಾದ ನೃತ್ಯಗಳಿಂದ (ಕುಣಿತಗಳಿಂದ) ಕೂಡಿರುತ್ತದೆ. ಈ ಎಲ್ಲಾ ಬಯಲಾಟಗಳು ಪುರಾಣ, ಇತಿಹಾಸ ಹ್ರಂಥಗಳಲ್ಲಿರುವ ಕಥಾಭಾಗಗಳನ್ನು ಆಧರಿಸಿ ರೂಪಗೊಂಡಿವೆ. ಇಂದು ಈ ಬಯಲಾಟಗಳು ಬೇರಳೆಣೆಕೆಯಲ್ಲಿ ಉಪಲಬ್ಬವಿವೆ. ಇವುಗಳನ್ನು ಶುದ್ಧಪಾಠದೊಟ್ಟಿಗೆ ವೆಬ್‌ಸೈಟ್‌ನಲ್ಲಿ ಕರವಾಗುವುದು.

ಖಂಡಕಾವ್ಯಗಳು

ದಾಸರು ಅನೇಕ ಖಂಡಕಾವ್ಯಗಳನ್ನು ರಚಿಸಿದ್ದಾರೆ. ಉದಾಹರಣೆಗೆ ಕಮಕದಾಸರು ನಳಚರಿತ್ರೆ, ರಾಮಧಾನ್ಯ ಚರಿತ್‌ಎಗಳನ್ನು ರಚಿಸಿದರೆ, ಭೀಮವ್ವನವರು ಶಕುಂತಲೋಪಾಖ್ಯಾನಾದಿಗಳನ್ನು ರಚಿಸಿರುವರು. ಗುರುಜಗನ್ನಾಠದಾಸರು ರಾಖವೇಂದ್ರವಿಜಯ, ಭವಿಷ್ಯೋತ್ತರ ಪುರಾಣಗಳನ್ನು ರಚಿಸಿರುವರು. ಇವುಗಳನ್ನು ಪರಿಷ್ಕರಿಸಿ ಓದುಗರಿಗಾಗಿ
ವೆಬ್‌ಸೈಟ್‌ನಲ್ಲಿ ಆಡಲಾಗುವುದು.

ಹರಿಕಥೆಗಳು

ಪುರಾಣೇತಿ ಹಾಸ ಕಥಾಭಾಗಗಳನ್ನಾಧರಿಸಿರ ಹರಿಕಥೆಗಳು ದಾಸಸಾಹಿತ್ಯ ಭಾಂಡಾಗಾರದಲ್ಲಿ ಬಹಳಷ್ಟಿವೆ. ಖಾದ್ರಿಯವರು ಕೃಷ್ಣಲೀಲಾ, ಕುಚೇಲೋಪಾಖ್ಯಾನ, ಹನುಮದ್ದಿಲಾಸಗಳೆಂಬ ಮೂರು ಅಪೂರ್ವ ಹರಿಕಥೆಗಳನ್ನು ರಚಿಸಿರುವರು. ಪ್ರಾಣೇಶದಾಸರು ಹತ್ತಾರು ಹರಿಕಥೆಗಳನ್ನು ರಚಿದರೆ. ಶ್ರೀನಿವಾಸಕಲ್ಯಾಣ ಮುಂತಾದ ಅನೇಕ ಹರಿಕಥೆಗಳು ಪ್ರಸಿದ್ಧವಾಗಿದೆ. ಈ ಎಲ್ಲವನ್ನು ಪರಿಷ್ಕರಿಸಲಿ ವೆಬ್‌ಸೈಟ್‌ನಲ್ಲಿ ಇಡಲಾಗುವುದು.

ಬೃಹತ್ಯತಿಗಳು :

ಲಕ್ರೀಡೆ,ರಾಸಕ್ರೇಡೆ,ಮುಯ್ಯದಪದ, ಕೇಲುಪದ, ವೈಕುಂಠವರ್ಣನೆ, ಗುಂಡಕ್ತಿಯ, ಸೀತಾಸ್ಪಯಂವರ, ರಾಮಭಜನೆ, ಮುಂತಾದ ನೂರಾರು ಬೃತ್ತೃತಿಗಳು ಇದು ಉಪಲಬ್ಧ್ಬವಿದೆ. ಅವುಗಳನ್ನು ಪರಿಷ್ಕರಿಸಿ, ರಚಯಿತರ ಪರಿಚಯದೊಟ್ಟಿಗೆ ವೆಬ್‌ಸೈಟ್‌ನಲ್ಲಿ ಇಡಲಾಗುವುದು.

ಪ್ರಮೇಯಗ್ರಂಥಗಳು :

ಆದ್ಯಾತ್ಮಮಾಲಾ, ಸಂಧ್ಯಾರಹಸ್ಯ, ಪಂಚಬೇಧ, ಪರಾಪರತತ್ವದೀಪಿಕಾ, ಸೃಷ್ಟಿರಹಸ್ಯ, ಪ್ರಮೇಪರಿಚಯ ಮುಂತಾದ ಅಪೂರ್ವ ಗಂಥಗಳು, ಗದ್ಯರೂಪದಲ್ಲಿ ಹರಿದಾಸರಿಂದ ರಚಿಸಲ್ಪಟ್ಟವೆ. ಆಧ್ಯಾತ್ಮಮಾಲಾದಿ ಕೆಂಗಂಥಗಳು ಗೊರೇಬಾಳ್‌ ಹನುಮಂತರಾಯರಿಂದ ಪ್ರಕಟಗೊಂಡಿವೆ. ಪ್ರಕಟಗಳ್ಳಬೇಕಾದ ಪ್ರಮೇಯ ಗ್ರಂಥಗಳು ಬಹಳಷ್ಟಿವೆ. ಆ ಎಲ್ಲವನ್ನು
ಶೋಧಿಸಿ ವೆಬ್‌ಸೈಟ್‌ದ್ದಾರ ಪ್ರಕಟಗೊಳಿಸಲಾಗುವುದು.

ಇದರಂತೆ ಪ್ರಕಟಗೊಂಜು, ಪ್ರಕಟಗೊಳ್ಳುದೆ ಇರುವ ತತ್ತ್ವಸುವ್ಹಾಲಿಗಳು, ದಂಡಕಗಳು, ಮುಂಡಿಕೆಗಳು ಬಹಳಷ್ಟಿವೆ ಅವುಗಳೆಲ್ಲವನ್ನು ಶೋಧಿಸಿ ಶುದ್ಧ ಪಾಠದೊಟ್ಟಿಗೆ ಈ ವೆಬ್‌ಸೈಟ್‌ದ್ವಾರಾ ಬಿಡುಗಡೆ ಮಾಡಲಾಗುವುದು.

Rayare Gatiyu Namage
ರಾಯರೇ ಗತಿಯು ನಮಗೆ

Address

T +91-08512-279459 / 28
E: info@sgsdsp.org

SGSDSP, SRS Matha,
Mantralayam, Adoni(Dt),
Kurnool District, Andhra Pradesh, INDIA

SRS Web Team © 2024. All Rights Reserved.