Skip to content Skip to footer

HariKathamrutasaara | ಹರಿಕಥಾಮೃತಸಾರ

 

Change Language  english 
ಶ್ರೇಷ್ಠ ದಾಸರು

ಶ್ರೀ ಜಗ್ಗನಾಥ ದಾಸರು

ಜಗನ್ನಾಥದಾಸರ ರಚನೆ ಎನಿಸಿಕೊಂಡ “ಹರಿಕಥಾಮೃತಸಾರವು” ದಾಸಸಾಹಿತ್ಯದಲ್ಲೇ ಮೇರು ಕೃತಿ.

ಸಮಗ್ರ ಹರಿದಾಸಸಾಹಿತ್ಯದ ಶಿರೋರತ್ನ, ಕನ್ನಡದ ಅಣುಸುಧೆ, ಆಚಾರ್ಯಮಧ್ವರ ಸತ್ತಿದ್ದಾಂತ ಪ್ರಕಾಶಿಣಿ
ಬಿಂಬೋಪಾಸನೆಯ ಕೈಪಿಡಿ, ಮೋಕ್ಷಕ್ಕೆ ಕೊಂಡೊಯ್ಯುವ ಪುಶ್ಚಕವಿಮಾನ, ತಾಪತ್ರಯ ತಾಪವನ್ನು ಕಳೆದು ಮನ್ಷಗೆ ಆನಂದವನ್ನುಂಟುಮಾಡುವ ದಿವ್ಯ ಚಂದ್ರಿಕೆ, ಭಕ್ತಿಯರಸ ಕಾರಂಜಿ, ಭಗವಂತನ ಸು೦ದರ ವಿಗ್ರಹ, ಸೃತಿ-ಪುರಾಣ-ಶೃತಿ ವೇದಾಂತ ಗ್ರಂಥಗಳ ಸಾರ ಸರ್ವಸ್ವ.

ಕನ್ನಡ ವಾಜ್ಕಯ ಪ್ರಪಂಚದಲ್ಲಿ ಈ ಗ್ರಂಥಕ್ಕೆ ಒಂದು ವಿಶಿಷ್ಟಸ್ಥಾನ. ಈ ಕನ್ನಡ ಗಂಥಕ್ಕೆ ಮೂರು ಸಂಸ್ಕೃತ ವಾಖ್ಯಾನಗಳಿರುವವು. ವೇದಾಂತ ಗಂಥಗಳಿಗಿರುವಂತೆ ಹತ್ತಾರು ವ್ಯಾಖ್ಯಾನಗಳು ಈ ಗಂಥಕ್ಕೆ ಅವೆ.

ಉಪಲಬ್ಧವಿರುವ ವ್ಯಾಖ್ಯಾನಗಳು

1) ಸಂಕರ್ಷಣ ಒಡೆಯರ ವ್ಯಾಖ್ಯಾನ (ಕನ್ನಡ)
2) ಗುರುವಿಜಯದಾಸರ ವ್ಯಾಖ್ಯಾನ (ಕನ್ನಡ)
3) ಗುರುಶ್ರೀಶವಿಠಲರ ವ್ಯಾಖ್ಯಾನ (ಕನ್ನಡ)
4) ದ್ರೌಪದೀಶವಿಠಲರ ವ್ಯಾಖ್ಯಾನ (ಕನ್ನಡ)
5) ಕಮಲಾಪತಿವಿಠಲರ ವ್ಯಾಖ್ಯಾನ (ಕನ್ನಡ)
6) ಗುರುಯೋಗಿ ಧ್ಯೇಯಾವಿಠಲರ ವ್ಯಾಖ್ಯಾನ (ಕನ್ನಡ)
7) ಜಂಬುಖಂಢಿವಾದೀರಾಜಾಚಾರ್ಯರ ವ್ಯಾಖ್ಯಾನ (ಕನ್ನಡ)
8) ಜಂಬುಖಂಢಿವಾದೀರಾಜಾಚಾರ್ಯರ ವ್ಯಾಖ್ಯಾನ (ಸಂಸ್ಕೃತ)
9) ಗುರುಜಗನ್ನಾಥದಾಸರ ವ್ಯಾಖ್ಯಾನ (ಸಂಸ್ಕೃತ)
( ಇದು ತಾಮ್ರಪರ್ಣಿಯವರ ವ್ಯಾಖ್ಯಾನವೆಂದು ಪ್ರಚಾರವಾಗಿದೆ)
10) ಮಂದ ಭೋಧೀನೀವ್ಯಾಖ್ಯಾನ ಶ್ಲೋಕರೂಪದಲ್ಲಿ (ಸಂಸ್ಕೃತ) ಗುರುಜಗನ್ನಾಥದಾಸರದು.
11) ಗುರುಜಗ್ನಾಥದಾಸರ ವ್ಯಾಖ್ಯಾನ ( ಕನ್ನಡ) ಪರಿಮಳ
12) ಪದ್ಮನಾಭದಾಸರ ವ್ಯಾಖ್ಯಾನ (ಕನ್ನಡ)

ಇಂಥಾ ಹರಿಕಥಾಮೃತ ಸಾರವನ್ನು ಪಾಠಾಂತರಗಳ ವಿಮರ್ಷಣೆಯೊಟ್ಟಗ ಶುದ್ಧ ಪಾಠದಿಂದ ಯುಕ್ತದನ್ನಾಗಿ ವೆಬ್‌ಸೈಟ್‌ನಲ್ಲಿ ಓದುಗರ ಸೌಕರ್ಯಕ್ಕಾಗಿ ಇಡಲಾಗುತ್ತದೆ.

ಆದರಂತೆ ಎಲ್ಲಾವ್ಯಾಖ್ಯಾನಗಂದಲೂ ಅನೇಕ ಅನುಭಾವಿಗಳ ನೂತನ ನೂತನ ಆಲೋಚನೆಗಳಿಂದಲೂ ಕೂಡಿದ ಸಮಗ್ರ ಹರಿಕಥಾಮೃತಸಾರವನ್ನು ಸಿದ್ಧಮಾಡಿ ವಎಬ್‌ಸೈಟ್‌ನಲ್ಲಿ ಇಡಲಾಗುವುದು .

ಇದರೊಟ್ಟಿಗೆ ವ್ಯಾಖಾನ ಕಾರರ ಜೀವಿತ ಚರಿತ್ರೆಗಳನ್ನು ಸಂಧಿಗಳಕ್ರಮವನ್ನ, ಪ್ರತಿಸಂಧಿಯ ಸಾರಾಂಶವನ್ನು, ಪ್ರತಿಸಂಧಿಯಲ್ಲಿರುವ ವಿಶಿಷ್ಟ ಪದ್ಯಗಳ ಚಿತ್ರಗಳನ್ನು, ದಾಸಾರ್ಯರು ಗ್ರಂಥದಲ್ಲಿ ಉಲ್ಲೇಖಿಸಿದ ಭಗವದ್ರೂಪಗಳ ಚಿತ್ರಗಳನ್ನು, ದಾಸರು ತಿಳಿಸಿದ ಪದ್ಧತಿಯಲ್ಲಿ ದೇಹಗಳ, ದೇಹಾವಯವಗಳ ಚಿತ್ರಗಳನ್ನು, ವಿಶೇಷರೀತಿಯಲ್ಲಿ ವಿವರಣೆಯೊಟ್ಟಿಗಿ ಕೊಜಲಾಗುವುದು. ಜಗನ್ನಾಥದಾಸರ ಜೀವನ ಚರಿತ್ರೆಯನ್ನು ಚಿತ್ರಗಳಿ೦ದ ಸಹಿತವಾಗಿ ವೆಬ್‌ಸೈಟ್‌ನಲ್ಲಿ ಇಡಲಾಗುವುದು.

ಆದರಂತೆ 15 ದಿನಗಳಿಗೆ ಒಮ್ಮೆ ಹರಿಕಥಾಮೃತ ಸಾರ್ಕೆ ಸಂಬಂಸಿದಂತೆ ಕನಿಷ್ಟ 5 ರಸಪ್ರಶ್ನೋತ್ತರಗಳನ್ನು ಸಂಧಿಗಳಕ್ರಮಕ್ಕನುಸರಿಸಿ ಬಿಡುಗಡೆಮಾಡಲಾಗುವುದು.

Rayare Gatiyu Namage
ರಾಯರೇ ಗತಿಯು ನಮಗೆ

Address

T +91-08512-279459 / 28
E: info@sgsdsp.org

SGSDSP, SRS Matha,
Mantralayam, Adoni(Dt),
Kurnool District, Andhra Pradesh, INDIA

SRS Web Team © 2024. All Rights Reserved.