ಶ್ರೀನಿವಾಸನ ಕರುಣೆಯ ಕಂದಮ್ಮರೆನಿಸಿದ ಶ್ರೀರಾಘವೇಂದ್ರಗುರುಸಾರ್ವಭೌಮರು,ತಮ್ಮ ಪ್ರತಿಬಿಂಬರೆನಿಸಿದ
ಶ್ರೀಸುಬುಧೇಂದ್ರತೀರ್ಥಶ್ರೀಪಾದರಿಗೆ ಪ್ರೇರಣೆನೀಡಿ, ಅವರದ್ದಾರಾ ಹಿಂದೂಧರ್ಮಕ್ಕೆ ತಂಪನ್ನುಂಟುಮಾಡಲು, ಅದನ್ನು
ಬೆಳಿಸಿ, ಸರ್ವತ್ರಬೆಳಗುವಂತೆ ಮಾಡಲು, ಗುರುಸಾರ್ವಭೌಮದಾಸಸಾಹಿತ್ಯಾಪ್ರಾಜೆಕ್ಟಿಗೆ ಭೀಜಾವಾಪ ಮಾಡಿಸಿದರು.
ಕೇವಲ ಐದು ವರ್ಷಗಳಲ್ಲಿ ಪ್ರಾಜೆಕ್ಟ್ ಹೆಮ್ಮರವಾಗಿ ಬೆಳೆದುನಿಂತಿದೆ.
॥ ಪ್ರಾಜೆಕ್ಟಿನ ಆಶಯಗಳು ॥
- ಭಾಷಾಪ್ರಾಂತರಗಳಭೇದವಿಲ್ಲದೆ ಸಮಾಜವನ್ನು ಒಗ್ಗೂಡಿಸಲುದೇಶಾದ್ಯಂತ ಭಜನಾಮಂಡಲಿಗಳ ಸ್ಥಾಪನೆ.
- ಭಜನಾಮಂಡಲಿಗಳಿಗೆ ಭಾರತೀಯತೆಯ ಬಗ್ಗೆ. ದಾಸಸಾಹಿತ್ಯದ ಬಗ್ಗೆ. ಅಭಿರುಚಿ-ತಿಳುವಳಿಕೆಗಳನ್ನುಂಟು
ಮಾಡಲು, ಮಂತ್ರಾಲಯದಲ್ಲೇ ಮೂರು ದಿನಗಳಿಗೆ ಸೀಮಿತವಾದ ಶಿಕ್ಷಣಾಶಿಭಿರಗಳನ್ನು ನಿರ್ವಹಿಸುವುದು.
- ವಿವಿಧ-ಕ್ಷೇತ್ರಗಳಲ್ಲಿ ಭಜನಾಮ೦ಡಲಿಗಳ ಸಂಘಟನಾಕಾರ್ಯಕ್ರಮಗಳ ನಿರ್ವಹಣೆ.
- ದಾಸರ ಆರಾಧನೆಗಳ ನಿರ್ವಹಣೆ.
- ಹರಿಕಥಾಮೃತಸಾರಗ್ರಂಥದಸಾಮೂಹಿಕ ಪಾರಾಯಣ. 32 ಸಂಧಿಗಳನ್ನು ಕಂಠಸ್ಥಒಪ್ಪಿಸಿದ ವ್ಯಕ್ತಿಗೆ, 32
ಸಾವಿರರೂಪಾಯಿಗಳನ್ನು ಕೊಟ್ಟು ಸತ್ಕರಿಸಿ, ಪ್ರೋತ್ಸಹಿಸುವುದು.
- ಲಕ್ಷ್ಮೀಶೋಭನೆ, ಲಕ್ಷ್ಮೀಹೃದಯಗಳ ಸಾಮೂಹಿಕಪಾರಾಯಣ.
- ತಿರುಮಲೆ-ಅಹೋಬಿಲ-ಮುಂತಾದಪ್ರಸಿದ್ಧಕೇತ್ರಗಳಲ್ಲಿ ಮೆಟ್ಟೋತ್ಪವಗಳ ನಿರ್ವಹಣೆ.
- ದಾಸಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು, ಕನ್ನಡ-ತೆಲುಗು-ಹಿಂದಿ-ಆಂಗ್ಲಭಾಷೆಗಳಲ್ಲಿ ಪುಸ್ತಕರೂಪ
ದಲ್ಲಿಮುದ್ರಿಸಿ, ಕಡಿಮೆಬೆಲೆಗೆ ಮಾರಾಟ ಮಾಡುವುದು.
- ಶ್ರೀಮಠದವೆಬ್‌ಸೈಟ್‌ದ್ಹಾರಾ ದಾಸಸಾಹಿತ್ಯದ ಬಗ್ಗೆ ಪಾಠ-ಪ್ರವಚನಗಳನ್ನು ಏರ್ಪಡಿಸುವುದು, ಚಿತ್ರಗಳ
ದ್ದಾರಾ ದಾಸಸಾಹಿತ್ಯವನ್ನು ಬೋಧಿಸುವುದು, ಸಂಪ್ರದಾಯಬದ್ಧವಾಗಿ ದಾಸರಕೃತಿಗಳನ್ನು, ಶುದ್ಧಪಾಠದೊಟ್ಟಿಗೆ
ಹೇಳಿ ಕೊಡುವುದು.
- ದಾಸಸಾಹಿತ್ಯದ ಬಗ್ಗೆ ಬೇಸಿಗೆ ಶಿಬಿರಗಳನ್ನು ಏರ್ಪಡಿಸುವುದು.
- ವರ್ಷಕ್ಕೆ ಎರಡರಂತೆ, ದಾಸಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗೋಷ್ಟಿಗಳನ್ನು ನಿರ್ವಹಿಸುವುದು.
- ಆಂಧ್ರ-ಕರ್ನಾಟಕಪ್ರಾಂತಗಳಿಗೆ ಸಂಬಂಧಿಸಿದ ಹರಿಕಥಾದಾಸರ ಸಮ್ಮೇಳನಗಳನ್ನು, ಮಂತ್ರಾಲಯದಲ್ಲಿ
ವರ್ಷಕ್ಕೆ ಎರಡುಬಾರಿ ನಿರ್ವಹಿಸುತ್ತಾ, ಹರಿಕಥಾದಾಸರಿಗೆ ಪ್ರೋತ್ಸಾಹ ನೀಡುವುದು.