ಹರಿದಾಸರ ಪರಂಪರೆ ಒಂದು ವಿಶಿಷ್ಟರೀತಿಯಲ್ಲಿ ಸಾಗಿ ಬಂದಿದೆ. ಈ ರಮಣೀಯ ದೃಶ ಮತ್ತಾವ
ದಾಸಪರಂಪರೆಯಲ್ಲೂ ಕಾಣಸಿಗುವುದಿಲ್ಲ.
ಈಕರ್ನಾಟಕ ಹರಿದಾಸಸಾಹಿತ್ಯ ಧೈತಮತ ಪ್ರತಿಷ್ಟಾಪನಾಚಾರ್ಯರಿಂದ ಪ್ರಸಿದ್ಧರಾದ ಶ್ರೀಮದಾನಂದ
ತೀರ್ಥರಿಂದ ಹೋಷಿತವಾಗಿರುವುದು. ಇದರ ಅಪೂರ್ವತೆ ಆಚಾರ್ಯರಿಂದ ರಚಿತವಾದ ಕನ್ನಡ ಕೀರ್ತನೆಗಳು
ಅಂದು ದೊರಯದ ಇರಬಹುದು. ಆದರೆ ಅವರ ಸಾಕ್ಷಾತ್ ಶಿಷ್ಯರೆನಿಸಿದ ನರಹರಿತೀರ್ಥರು ಕನ್ನಡ ಕೀರ್ತನೆಗಳನ್ನು
ರಚಿಸಿ ದಾಸಸಾಹಿತ್ಯದ ಉಗಮಕ್ಕೆ ಕಾರಣರಾಗಿರುವರು. ಇದಕ್ಕೆ ಆನಂದ ತೀರ್ಥರ ಅನುಮತಿ, ಆದೇಶ, ಆಜ್ಞೆ
ಅನುಮತಿಗಳು ಸಹಜವಾಗಿ ಇದ್ದೇ ಇರುತ್ತದೆ.
ಮುಂದೆ ಆರ್ಚುರ ಪರಂಪರೆಯಲ್ಲಿ ಬ೦ದ ಟೀಕಾಚಾರ್ಯರು, ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು
» ವಿಜಯೀಂ೦ದ್ರರು, ರಾಘವೇಂದ್ರರು, ವರದೇಂದ್ರರು, ವ್ಯಾಸತತ್ವಜ್ಯರೇ ಮೊದಲಾದ ಪ್ರಧಾನ ಪೀಠಾಇಪತಿಗಳೆಲ್ಲರೂ
ಸ್ವತಃ ಕೀರ್ತನೆಗಳನ್ನು ರಚಿಸಿ ದಾಸಸಾಹಿತ್ಯಕ್ಕೆ ಮಹಾ ಹೋಹಷಕರಾದರು. ಯತಿಗಳು ದಾಸಸಾಹಿತ್ಯ ಪೋಷಕರಾಗಿ
ಇಂದಿಗೂ ಸಮಾಜದಲ್ಲಿರುವರು. ಇದಕ್ಕೆ ಸಾಕ್ಷಿಯಾಗಿ ಭಂಡಾರಿಕೇರಿ ಮಠಾಧೀಶರಾದ ವಿದ್ಯೇಶತೀರ್ಥರು,
ತಂಬಿಹಳ್ಳಿ ಮಠಾಧೀಶರನ್ನು ಕಾಣಬಹುದು. ಶ್ರೀಶಂಕರಭಗತ್ಪಾದರಾಗಲಿ, ಶ್ರೀರಾಮಾನುಜಾಚಾರ್ಯರಾಗಲಿ
ತಮ್ಮ ಆಡು ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದಂತೆ ಕಾಣುವುದಿಲ್ಲ ಇನ್ನು ಪುರಂದರದಾಸರು, ಕನಕದಾಸರು
ಪ್ರಸನ್ನವೇಂಕಟದಾಸರು, ವಿಜಯದಾಸರ ಮೊದಲಾದ ಗೃಹಸ್ಥಾಶ್ರಮಿಗಳು ಗೇಪಾಲದಾಸರೇ ಮೊದಲಾದ ಬ್ರಹ್ಮಚಾ-
ರಿಗಳು ಹೆಳವನಕಟ್ಟಿ ಗಿರಿಯಮ್ಮನೇಮೊದಲಾದ ಮಹಿಳಾಮಣಿಗಳು ಈ ದಾಸಸಾಹಿತ್ಯವನ್ನು ಸರ್ವತೋಮುಖವಾಗಿ
ಬೆಳಿಸಿರುವರು.
ಷುರಂದರದಾಸರಿಂದ ಹಿಡಿದು ಶ್ಯಾಮಸುಂದರದಾಸರವರೆಗೆ ಕನ್ನಡದಾಸ ಪರಂಪರೆಯನ್ನು ವಿಹಂಗಮ
ದೃಷ್ಟಿಯಲ್ಲಿ ನೋಡಿದಾಗ 400ರಕ್ಕೂ ಹೆಚ್ಚು ಹರಿದಾಸರು ಆಗಿ ಹೋಗಿದ್ದಾರೆ. ಈ ದಾಸಪರಂಪರೆ ಇಂದಿಗೂ
ಜೀವದ್ಗಂಗೆಯಂತೆ ಹರಿಯುತ್ತಾ ಇದೆ.
ಈ ಎಲ್ಲಾ ಹರಿದಾಸರೇ ಕಾಲ, ದೇಶ, ಜನನ ಜೀವನ ಚರಿತ್ರೆ ಶಿಷ್ಯರು ಅಂಕಿತನಾಮ, ಸಮಕಾಲೀನರು
ಅವೇ ಮೊದಲಾದುವುಗಲನ್ನು ವಿಮರ್ಶನ ಪೀರ್ವಕವಾಗಿ ಪುಸ್ತಕಗಳ ರೂಪದಲ್ಲಿ ದಾಸಸಾಹಿತ್ಯಾಭಿಮಾನಿಗಳಿಗೆ
ಕೊಡಲಾಗುವುದು, ವೆಬ್‌ಸೈಟ್‌ನಲ್ಲು ಇಡಲಾಗುವುದು.