ಕನ್ನಡ ಹರಿದಾಸಸಾಹಿತ್ಯಕ್ಕೆ ಮೂಲಪುರುಪರಾಗಿ ತಿಳಿದು ಬಂದವರೆಂದರೇ ಶ್ರೀನರಹರಿತೀರ್ಥರು. ಇವರು
ಶ್ರೀಮಧ್ವಚಾರ್ಯರ ಸಾಕ್ಷಾತ್ ಶಿಷ್ಯರು. ಅವರಾದ ಮೇಲೆ ಅರವತ್ನಾಲ್ಕು ಜನ ಆದ್ಯರು ಹುಟ್ಟಿ ಈಪಂಥವನ್ನು
ಮುನ್ನಡಿಸಿದರು. ಈ ಆದ್ಯರಲ್ಲಿ ಕೆಲವರ ಹೆಸರುಗಳನ್ನು ಜಯದಾಸರು ಪುರಂದರ ದಾಸರಿಗಿಂತಲು ಪೂರ್ವಿಕರೆಂಬಂತೆ
ತಮ್ಮ ಒಂದು ಸುಳಾದಿಯಲ್ಲಿ ಹೇಳಿರುವರು.
ಮುಂದೆ. ಈ ದಾಸಪಂಥದಲ್ಲಿ ಶ್ರೀಪಾದರಾಜರು,ವ್ಯಾಸರಾಯರು,ವಾದಿರಾಜರು, ವಿಜಯೀಂದ್ರರು,
ಪುರಂದರದಾಸರು, ಕನಕದಾಸರು ವೈಕುಂಠದಾಸರು ಬಂದರು. ಈ ಏಳು ಜನ 15 ಮತ್ತು 16 ನೇ ಶತಮಾನಗಳ
ಮಧ್ಯದಲ್ಲಿ ಬಾಳೆ, ಬದುಕಿ ಭೂಮಿಯನ್ನು ಪವಿತ್ರಗೊಳಿಸಿದ ಹೂತಾತ್ಮರು. ಉಪಲಬ್ಬ ಪ್ರಮಾಣಗಳಿಂದ ನೋಡಿದರೆ
ಈ ಕನ್ನಡ ದಾಸಸಾಹಿತ್ಯವು 12 ನೇ ಶತಮಾನದಲ್ಲಿ ಪ್ರಾರಂಭವಾಗಿ, ಮುಂದೆ 15 ಮತ್ತು 16 ನೇ ಶತಮಾನಗಳಲ್ಲಿ
ಉನ್ನತ ಸ್ಥಾನವನ್ನು ಪಡೆದು, ತರುವಾಯ ಒಂದುನೂರು ವರ್ಷಕಾಲ ಸುಪ್ತವಾಗಿದ್ದು, ಪುನಃ 17 ನೇ ಶತಮಾನದಲ್ಲಿ
ಅಂದರೆ ವಿಜಯದಾಸರ ಕಾಲದಲ್ಲಿ ಅತ್ಯುನ್ನತ ಸ್ಥಿತಿಯನ್ನು ಹೊಂದಿತು. ಇಂದಿಗು ಈ ಪ್ರವಾಹದ ರುರಿ ಹರಿಯುತ್ತಲೇ
ಇದೆ. ಈ ಸಾಹಿತ್ಯ ಜೀವನದಿ ಎಂದಲ್ಲಿ ತಪ್ಪಾಗಲಾರದು.
ಶ್ರೀನರಹರಿತೀರ್ಥರಿಂದಲೇ ಈಹರಿದಾಸಸಾಹಿತ್ಯದ ರಚನಾಕಾರ್ಯಕ್ರಮ ಪ್ರಾರಂಭವಾಯಿತೆಂದು ಹೇಳಲು
ಸಾಧ್ಯವಿಲ್ಲ. ಇವರ ಗುರುಗಳಾದ ಮಧ್ವಾಚಾರ್ಯರು ಸಹ ತಮ್ಮ ತತ್ವಗಳನ್ನು, ಉಪದೇಶಗಳನ್ನು ತುಲುಭಾಷೆಯಲ್ಲಿ ರಚಿಸಿ
ಬಿತ್ತರಿಸಿದ್ದರೆ೦ಬ ವಾರ್ತೆಯು ಇಂದಿಗೂ ಇದೆ. ಇಷ್ಟು ಮಾತ್ಚಲ್ಪದೆ ಸ್ತೀಮದ್ವಾಚಾರ್ಯರು ಸಂಗೀತ ಶಾಸ್ತ್ರಕ್ಯನುಗುಣವಾಗಿ
ದ್ವಾದಲಸ್ತೇತ್ರವೆಂಬ ಕೃತಿಯನ್ನು ರಚಿಸಿರುವರು. ಈ ರಚನೆ ರಾಘ, ತಾಳಬದ್ದವಾಗಿ ಸಾಗಿದೆ. ಇಂದಿಗೂ ಉಡುಪಿಯ
ಪ್ರಾಂತದಲ್ಲಿ ರಾಗಯುಕ್ತವಾಗಿ ಈ ದ್ವಾದಶ ಸ್ತೋತ್ರವನ್ನು ಹಾಡುವರು. ಈ ರಚನೆಗೆ ನರಹರಿತೀರ್ಥರಿಗೆ ಸ್ಫೂರ್ತಿಯ್ನ
ಕೊಟ್ಟಿರಬಹುದು.