ದಾಸಸಾಹಿತ್ಯದ ವೈಶಿಷ್ಟ

ಕನ್ನಡ ಹರಿದಾಸ ಸಾಹಿತ್ಯವು ದ್ವೈತ ಸಂಪ್ರದಾಯವೆಂಬ ಆಧಾರ ಸ್ತಂಭವನ್ನಾಶ್ರಯಿಸಿನಿಂತಾಗ್ಯೂ ತನ್ನ
ಪ್ರಭಾವವನ್ನು ಸರ್ವತೋಮುಖವಾಇ ಬೀರಿದೆ. ಈ ಸಾಹಿತ್ಯದಲ್ಲಿ ಕೇವಲ ವೇದಾಂತ ಚರ್ಚೆ ಮಾತ್ರವಲ್ಲದೆ, ಸಾಮಾನ್ಯ
ಮಾನವನನ್ನು ಸನ್ಮಾರ್ಗದಲ್ಲಿ ನಡೆಯಿಸಿ ಭಗವ೦ತನತ್ತ ಸೆಳೆಯಲು ಬೇಕಾದ ಸರ್ವ ಸಾಧನೆಗಳು ಸ್ಪಷ್ಟವಾಗಿ ಹೇಳ್ಪಟ್ಟಿದೆ.
ದಾಸಸಾಹಿತ್ಯದ ಪ್ರಧಾನಗುರಿ, ಕಲುಷಿತವಾದ ಕಲಿಯುಗದ ಸಮಾಜದಲ್ಲಿ ಬಾಳ್ವೆಮಾಡಿಕೊಂಡು, ಅಸ್ಪಸ್ಥಚಿತ್ತನಾದ
ಜೀವಿಗೆ, ಹಿತವಾದ ರೀತಿಯಲ್ಲಿ ಸುಲಭವಾಗಿ ಆಚರಿಸಲು ಯೋಗ್ಯವಾದ ಧರ್ಮಗಳನ್ನು ಹೇಳುತ್ತಾ, ಸಾರಾಸಾರ
ಪದಾರ್ಥಗಳ ವ್ಹೇಚನೆಯನ್ನು ದೃಷ್ಟಾಂತ ಪೂರ್ವಕವಾಗಿ ತೋರಿ, ಅವನ ಮನವನ್ನು ನಿರ್ಮಲಮಾಡಿ, ಅಲ್ಲಿ ಹ-
ರಿಭಕ್ತಿಬೀಜವನ್ನು ನೆಟ್ಟು, ಮುಕ್ತಿಯ ಪಥಕ್ಕೆ ಸೇರಿಸುವುದೇ ಆಗಿದೆ.

ಈ ದಾಸಸಾಹಿತ್ಯವು ಕೆಲವೆಡೆ ಪ್ರಭು ಸಮ್ಮಿತೆಯಂತೆಯೂ ಮತ್ತೂ ಕೆಲವೆಡೆ ಮಿತ್ರ ಸಮ್ಮಿತೆಯಂತೆಯೂ,
ಇನ್ನೂ ಕೆಲವೆಡೆ ಕಾಂತಾಸಮ್ಮಿತೆಯಂತೆಯೂ ತೋರುವುದು. ಸಂದರ್ಭೋಚಿತವಾಗಿ ಮೂರು ರೂಪ ಧರಿಸಿದ
ಈ ಸಾಹಿತ್ಯದ ಔನ್ನತ್ಯವನ್ನು ವೈಶಿಷ್ಟ್ಯವನ್ನು ಎಷ್ಟುವರ್ಣಇಸಿದರೂ ಕಡಿಮೆಯೆ. ಮತದ ದುರಭಿಮಾನವನ್ನು ಬಿಟ್ಟು
ಸವೃದಯತೆಯಿಂದ ದಾಸಸಾಹಿತ್ಯದ ಒಳಹೊಕ್ಕು ಪರಿಶೀಲಿಸಿದರೆ ಅದರ ವೈಭವವೂ ಸಮಾಜದ ಬಗ್ಗೆ ಅದಕ್ಕಿರುವ
ಕಳಕಳಿಯೂ ಸ್ಪಷ್ಟವಾಗುವುದು.

ಇನ್ನು ದಾಸ ಸಾಹಿತ್ಯದ ವೈಶಿಷ್ಟ ಕೆ ಬಗ್ಗೆ ಹೇಳಬೇಕಾದಲ್ಲಿ ಇದೊಂದು ಅಪೂರ್ವಸಾಹಿತ್ಯ, ಗಹನವಾದ
ವೇದಗಳ ನಿಜಾರ್ಥವನ್ನು ವಿವರಿಸಲು ಹೊರಹೊರಟ ವ್ಯಾಸಸಾಹಿತ್ಯ ಹಾಗೂ ಸಂಸ್ಕೃತ ದಾಸ ಸಾಹಿತ್ಯಗಳ
ಮಾರ್ಗದಲ್ಲಿ ಮುನ್ನಡೆದ ಏಕೈಕ ಸಾಹಿತ್ಯವಾಗಿದೆ. ಶ್ರುತಿ, ಸ್ಮೃತಿ, ಪುರಾಣ, ತಂತ್ರಶಾಸ್ತ್ರ ವೇದಾಂತ ಗಂಥಗಳಲ್ಲಡಕವಾದ
ಅಪೂರ್ವಾರ್ಥಗಳನ್ನು, ಜನಸಾಮಾನ್ಯಕ್ಕೆ ಸುಲಲಿತವಾದ ಕನ್ನಡ ಭಾಷೆಯಲ್ಲಿ ದೊರೆಯುವಂತೆ ಮಾಡಿದ ಘನತೆ ಈ
ಕನ್ನಡ ಹರಿದಾಸ ಸಾಹಿತ್ಯಕ್ಕೆ ಮೀಸಲಾದುದು.

ಚಕ್ರಾಬ್ಬಮಂಡಲ, ಭದ್ರಿಕಾಮಂಡಲ, ದೇವಪೂಜಾ ಪದ್ಧತಿ ಇವು ತಂತ್ರಶಾಸ್ತ್ರಗಳಲ್ಲಿ ಬರುವ ಗಹನವಾದ
ವಿಷಯಗಳು, ಸಾಮಾನ್ಯವಾಗಿ ಪಂಡಿತರಿಗೂ ನಿಲುಕದ ವಿಷಗಳು. ಇಂಥಾ ಜಟಿಲವಾದ ಅಪೀರ್ವ ವಿಷಯಗಳನ್ನು
ಹರಿದಾಸರು ಸುಂದರವಾಗಿ, ಸುಲಭವಾಗಿ, ಲಯಬದ್ಧವಾಗಿ ಹಾಡಿ ವಿವರಿಸಿರುವರು. ಇಂದಿಗೂ ಕನ್ನಡ ನಾಡಿನಲ್ಲಿ
ಅನೇಕ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಚಕ್ರಾಬ್ಬಮಂಡಲವನ್ನು ರಂಗವಲ್ಲಿ ರೂಪದಲ್ಲಿ ಚಿತ್ರಿಸುವರು. ಈ
ವಿಷಯದಲ್ಲಿ ಹರಿದಾಸರ ಉಪಕಾರ ಚಿರಸ್ಕರಣೇಯ. ಶ್ರೀ ಬನ್ನಂಜೆ ಗೇವಿ೦ದಾಚಾರ್ಯರು ತಮ್ಮ ಅನುವಾದದಿಂದ
ಕೂಡಿದ ತಂತ್ರಸಾರ ಸಂಗ್ರಹದ ಪರಿಶಿಷ್ಟದಲ್ಲಿ, ಚಕ್ರಾಬ್ಬಮಂಡಲವನ್ನು ಕುರಿತು ವಿವರಿಸುತ್ತಾ, ಶ್ರೀವಿಜಯದಾಸರ
ಉಪಕಾರವನ್ನು ಸ್ಮರಿಸುವರು, ಹರಿದಾಸರ ಉಪಕಾರ ಈ ಚಕ್ರಾಬ್ದಾದಿ ಮಂಡಲಗಳನ್ನು ಕೃತಿಗಳ ರೂಪದಲ್ಲಿ ವಿವ-
ರಿಸುವದರೊಟ್ಟಿಗೆ ಮುಗಿಯಲಿಲ್ಲ. ಜನ ಸಾಮಾನ್ಯರಿಗೆ ಈ ಮಂಡಲಗಳ ಪರಿಚಯವನ್ನು ಇನ್ನೂ ಸುಲಭ ರೀತಿಯಲ್ಲಿ
ಮಾಡಿಕೊಡಲು, ಬೃಹದಾಕಾರದ ಚಿತ್ರಗಳನ್ನು ಸಹ ಬರೆದಿರುವರು. ಈ ಮಹತ್ಕಾರ್ಯವನ್ನು ಮೊಟ್ಟಮೊದಲು
ಮಾಡಿದವರು ಶ್ರೀಗೋಪಾಲದಾಸರು. ವಿಜಯದಾಸಾದಿ ಪ್ರಾಚೀನ ಹರಿದಾಸರು ಬರೆದ ಚಿತ್ರಪಟಗಳು ನಮಗೆ
ದೊರೆತಿಲ್ಲ. ಗೋಪಾಲದಾಸರ ನಂತರದಲ್ಲಿ. ಜಗನ್ನಾಥದಾಸರೇ ಮೊದಲಾದ ಅನೇಕ ಹರಿದಾಸರು, ಗಹನವಾದ
ಅನೇಕ ವಿಷಯಗಳನ್ನು ಜನರಿಗೆ ಚಿತ್ರಗಳ ದ್ವಾರಾ ತಿಳಿಯ ಹೇಳಲು ಪ್ರಯತ್ನಿಸಿರುವರು.

ಉಪನಿಷತ್ತುಗಳ ಹಾಗೂ ಪುರಾಣ ರಹಸ್ಯಗಳನ್ನು ತಿಳಿಯ ಹೇಳುವಲ್ಲಿ ಹರಿದಾಸರಪ್ರಯತ್ನ ಪೂರ್ಣ ಫಲಕಾ-
ರಿಯಾಗಿದೆ. ಒಂದು ದೃಷ್ಟಿಯಲ್ಲಿ ಹರಿದಾಸರ ಕೃತಿಗಳು ಉಪನ್ಹ. ತಿನ ಬಾಷಾ೦ತರಗಳು ಎಂದಲ್ಲಿ ತಪ್ಪಾಗಲಾರದು. ಹ-
ರಿದಾಸರ ಕೃತಿಗಳು ಉಪನಿಷತ್ತಿನ ಭಾಷಾ೦ತರಗಳು ಎಂದಲ್ಲಿ ತಪ್ಪಾಗಲಾರದು. ಹರಿದಾಸರು ತಮ್ಮ ಕೆಲ ಕೃತಿಗಳಲ್ಲಿ
ಒಂದು ಉಪನಿಷತ್ತನ್ನೋ ಅಥವಾ ಉಪನಿಷತ್ತಿನ ಒಂದು ಭಾಗವನ್ನೋಪೂರ್ಣವಾಗಿ ಅನುವದಿಸಿರುವುದನ್ನು
ಕಾಣಬಹುದು. “ದ್ವಾಸುಪರ್ಣಾಸಯುಜಾಸಖಾಯೌ” ಎನ್ನವ ಶ್ರುತಿಯನ್ನು ಪುರಂದರದಾಸರು, “ಜಯವದೆ

ಜಯವದೆ ಈ ಮನೆತನಕೆ- ಬಿಡುಬಿಡು ಬಿಡಿಬಿಡು ಮನ ಸಂಶಯವ” ಎನ್ನುವ ಹಾಡಿನಲ್ಲಿ ಪೂರ್ಣವಾಗಿ
ಅನುವಾದಿಸಿರುವರು. ಜಾನಪದ ಶೈಲಿಯಲ್ಲಿರುವ ಈ ಹಾಡು ‘ಬುಡುಬುಡುಕೆ ಹಾಡು” ಎಂದು ಪ್ರಸಿದ್ಧವಾಗಿದೆ.
ಆದಕಾರಣವೇ ಪುರಂದರದಾಸ ಸಮಗ್ರ ಕೃತಿಗಳು ಪುರಂದರೋಪನಿಷತ್ತೆಂದೇ ಪ್ರತೀತಿಯಾಗಿವೆ. ಸ್ತೀವಿಜಯದಾಸರ
ಸಮಗ್ರ ಸುಲಾದಿಗಳು ಪೂರ್ಣ-ಉಪನಿಷದರ್ಥದಿಂದಲೇ ಕೂಡಿವೆ.

ಪ್ರತಿ ಮಾನವನೂ ತನ್ನನ್ನು ಹಾಗೂ ಬಾಹ್ಯ ಪ್ರಪಮಚವನ್ನು ಎರಡು ಸಂದರ್ಭಗಳಲ್ಲಿ ಮರೆಂಯುತ್ತಾನೆ.
ಮೊದಲನೆಯ ವಿಸ್ತ ಕೃತಿ ಆಧ್ಯಾತ್ಮಿಕ ಪ್ರಪಂಚದಲ್ಲಿ. ಎರಡನೆಯ ವ್ಸ ಅತೆ ಲೌಕಿಕ ಪ್ರಪಂಚದಲ್ಲಿ. ಜ್ವಚನ-ಭಕ್ತಿ
ವೈರಾಗ್ಯಗಳಿಂದ ಪೂರ್ಣನಾದ ಜೀವಿಯು ಆ ಭಗವಂತನ ಒಲುಮೆಯಿಂದ, ಹೃದಯಾಂತರ್ಯಾಮಿಯಾದ ತನ್ನ
ಬಿಂಬದ ದರ್ಶನವನ್ನು ಪಡೆಯುವನು. ಇದೇ ಅಪರೋಕ್ಷ. ನಿರತಿಶಯಾನಂದದಾಯಕವಾದ ಆ ಸುಸಮಯದಲ್ಲಿ
ಪ್ರತಿ ಜೀವಿಯೂ ತನ್ನನ್ನೂ ತನ್ನ ಸರ್ವಸ್ವವನ್ನೂ ಮರೆಯುವನು. ಇದರಂತೆ ದೈಹಿಕಾನ೦ದವನ್ನುಣಿಸುವ ಲೈಂಗಿ-
ತ ಪಕ್ರಿಯೆಯಲ್ಲೂ, ಎಲ್ಲರೂ ಎಲ್ಲವನ್ನೂ ಮರೆಯುವರು. ಮೊದಲನೆಯದು ಶಾಶ್ವತಾನಂದ. ಎರಡನೆಯದು
ಕ್ಲಣಿಕಾನಂದ. ಒಂದು ಬಂಧಮೋಚಕ. ಮತ್ತೊಂದು ಬಂಧಕ. ಬಂಧಕವೆ೦ದ ಮಾತ್ರದಲ್ಲಿ ಯಾರೂ ಬಿಡುವಂತಿಲ್ಲ.
ಆಶ್ರಮಗಳಲ್ಲಿ ಗೃಹಸ್ತಾತ್ರಮ ಅತ್ಯಂತ ಶ್ರೇ,ಠವಾದುದು. ಪ್ರಜೋತ್ಪತ್ತಿ ಅತ್ಯಾವಶ್ಯಕ. “ಇರಬೇಕು ಇದ್ದು ಜೈಸಬೇಕು”
ಬಂಧಕವು ಬಂಧಮೋಚಕವಾಗಬೇಕು. ಪ್ರಾಣಾಂತಕವಾದ ವಿಷ ಪ್ರಾಣ ರಕ್ಷಣೆಗೆ ಉಪಕರಿಸುವಂತೆ. ವಿಶ್ವದ ಯಾವ
ಸಾಹಿತ್ಯದಲ್ಲೂ ಇದಕ್ಕೆ ಬೇಕಾಗುವ ಉಪಾಯವನ್ನು ಸೂಚಿಸಿಲ್ಲ. ಅಂಧಕಾರ ಬಂಧುರವಾದ ಈ ಮಾರ್ಗದಲ್ಲಿ
ಪ್ರಯಾಣಇಸುವ ಪ್ರತಿ ಜೀವಿಗೂ, ಕೇವಲ ವೈದಿಕ ಸಾಹಿತ್ಯವು ಮಾತ್ರ ಜ್ವಲಂತಕ್ಕೆದೀಪವಾಗಿದೆ. ಬೃಹದಾರಣ್ಯ-
ಛಾಂದೋಗ್ಯಗಲಲ್ಲಿ ಇದರ ಪ್ರಸ್ತಾಪವಿದೆ.

ಅನಿರುದ್ಧ ಶರೀರದಿಂದ ಯುಕ್ತನಾದ ಜೀವಿಯನ್ನು ಭಗವಂತನು ಆದಿಯಲ್ಲಿ ಆಕಾಶದಲ್ಲಿರಿಸುತ್ತಾನೆ. ನಂತರದಲ್ಲಿ
ಮೇಘಮಂಡಲದಲ್ಲಿರಿಸಿ, ವೃಷ್ಟಿದ್ವಾರಾ ಭೂಮಿಯಲ್ಲಿ ಬೆಳೆಯುವ ಧಾನ್ಯಾದಿಗಳಲ್ಲಿಡುವನು. ಪುನಃ ಅಲ್ಲಿಂದ ಪುರುಷನ
ತೇಜೋಮಯವಾದ ರೇತಸ್ಸಿನಲ್ಲಿ ಕೆಲವು ಕಾಲವಿಟ್ಟು, ಆ ಪುರುಷ ರೇತೋದ್ವಾರಾ ಸ್ತ್ರೀಗರ್ಭದಲ್ಲಿಡುವನು. ಜನಿಸುವ
ಆ ಜೀವಿಗೆ ಮಾತೃಗರ್ಭದಲ್ಲಿ ಶ್ರೀಹರಿಯು ಅನಿರುದ್ಧಾದಿ ಪಂಚರೂಪಗಳಿಂದ ಸ್ಥೂಲ ಶರೀರವನ್ನು ಕರುಣಿಸುವನು.
ಇಲ್ಲಿ ಗಗನ, ಮೇಘ, ಭೂಮಿ, ಪುರುಷಸ್ತ್ರೀ ಅವೇ ಐದು ಅಗ್ನಿಗಳು. ಈ ಐದು ಅಗಳಲ್ಲಿ ಮರೆಯದೆಜೀವಿಯನ್ನು
ದೇವತೆಗಳು ಶ್ರೀಹರಿಯಲ್ಲಿ ಹೋಮಿಸುವರು ಎಂದು ತಿಳಿಯುವ ಕ್ರಮಕ್ಕೆ “ಪಂಚ ಮಹಾಯಜ್ಞ’ವೆಂದು ಹೆಸರು.

ಲೌಕಿಕ ಸುಖಾನುಭವದಲ್ಲಿ ಪರಮೋತ್ತಮವಾದ ಆಧ್ಯಾತ್ಮಿಕ ಸುಖಾನುಭವದ ತುರುಳನ್ನು ತಿಳಿಸಿಕೊಟ್ಟ
ಉಪನಿಷತ್ತುಗಳು, ಸೈಂಗಿತ ವ್ಯಾಪಾರವನ್ನುಂ ಕುಜ್ಞವನ್ನಾಗಿಸಿವೆ. ಈ ಅನುಸಂಧಾನದಿ೦ದ ಉತ್ತಮ ಪ್ರಜೋತ್ಪತ್ತಿ
ಹಾಗೂ ಭಗವದನು/ಹ ಪಾಪ್ತಿ ಇದೇ “ಕಾಯಕವೇ ಕೈಲಾಸ” ಎನ್ನುವ ನಾಣ್ಣುಡಿಗೆ ನಿರ್ವಚನ. ಈ ಅಪೂರ್ವವಾದ
ಉಪನಿಷದ್ರಹಸ್ಯವನ್ನು ಕರ್ನಾಟಕ ಹರಿದಾಸರು ಕನ್ನಡೀಕರಿಸಿ ಸಮಾಜಕ್ಕೆ ಮಹದುಪಕಾರವನ್ನ ಮಾಡಿರುವರು. ಈ
ಸಾಹಿತ್ಯವನ್ನುಳಿದು ಉಳಿದ ಯಾವ ಪ್ರಾಂತೀಯ ಸಾಹಿತ್ಯದಲ್ಲೂ ಈ ಅಪೀರ್ವ ವಿವರಣೆಯ ಘಟ್ಟವನ್ನು ಕಾಣಲಾರೆವು.
ಇದು ಹರಿದಾಸ ಸಾಹಿತ್ಯದ ವೈಶಿಷ್ಟ ₹

“ಬಹು ಚಿತ್ರ ಜಗದ್ಭಹುಧಾಕರಣಾತ್‌ ಪರಶಕ್ತಿರನಂತಗುಣಃ ಪರಮಃ” ಇದು ಆಚಾರ್ಯ ಮಧ್ದರ ಅಮೃತವಾಣಿ.
ಚಿತ್ರವಿಚಿತ್ರವಾದ ರೀತಿಯಲ್ಲಿ ಅನಂತವಾಗಿ ಸೃಜಿಸಲ್ಪಟ್ಟ ಈ ವಿಶ್ವದ ಅರಿವು ಅತ್ಯಾವಶ್ಯಕ. ಇದರಿಂದ ಭಗವಂತನ
ಶಕ್ತಿ ಸಾಮರ್ಥ್ಯಗಳ ತಿಳಿವಳಿಕರೆಯುಂಟಾಗಿ, ಗುಣನಿಧಿಯಾದ ಅವನ ಸರ್ವೋತ್ತಮತ್ತ್ವವು ತಿಳಿದುಬರುವುದು. ಈ
ಚರಾಚರಾತ್ಮಕವಾದ ಅನಂತ ವಿಶ್ವದ ಸೃಷ್ಟಿಕರ್ತನು ಆ ಶ್ರೀಹಯೆ. ಅತ ಏವ ವೇದಗಳಲ್ಲಿ, ಪುರಾಣಗಲ್ಲಿ ವಿಸೃತವಾಗಿ
ಸೃಷ್ಟಿಯ ರಹಸ್ಯವು ವಿವರಿಸಲ್ಪಟ್ಟಿದೆ. ಪುರಾಣ ಲಕ್ಷಣದಲ್ಲಿ ಸೃಕ್ರಿಮದ ವರ್ಣನೆಯು ಪ್ರಥಮಸ್ಥಾನವನ್ನು ಆಕ್ರಮಿಸಿ
ನಿಂತಿದೆ.

ವೇದವ್ಯಾರು ಸೃಷ್ಟಿಕ್ರಮವನ್ನು ಸಮಗ್ರವಾಗಿ ಒಂದೇ ಪುರಾಣಲ್ಲಿ ಹೇಳದೆ, ಒಂದೊಂದು ಪುರಾಣದಲ್ಲಿ
ಒಂದೊಂದು ಭಾಗವನ್ನು ವಿವರಿಸಿರುವರು. ಇದೆಲ್ಲವನ್ನು ಒಂದೆಡಗೆ ಸೇರಿದಾಗ ಮಾತ್ರ ಸಂಪೂರ್ಣ ಸೃಷ್ಟಿ ಪ್ರಕರಣವು

ಸಿದ್ಧವಾಗುವುದು. ಈ ಮಹತ್ಕಾರ್ಯಮ್ನ ಸಾಸಿದವರೆಂದರೆ ರ್ಕಾಟಕ ಹರಿದಾಸರು. ಪಂಡಿತರಿಗೂ ಸಹ ಸೃಷ್ಟಿ
ಪ್ರಕರಣವು ಕಬ್ಬಿಣದ ಕಡಲೆಯಾಗಿದೆ. ಹರಿದಾಸರು ಮಾತ್ರ ಈ ಕ್ಲಿಷ್ಟವಾದ ಪ್ರಕರಣವನ್ನು ಕನ್ನಡದಲ್ಲಿ ಸುಲಭವಾಗಿ
ಅರ್ಥವಾಗುವಂತೆ ಸುಂದರವಾಗಿ ಪದ-ಸುಳಾದಿಗಳ ರೂಪದಲ್ಲಿ ರಚಿಸಿ, ಸವಾಜಕ್ಕೆ ಹಂಚಿಕೊಟ್ಟಿರುವರು. ವಿಶ್ವದ
ಮಧ್ಯದಲ್ಲಿದ್ದ ಜೀವನಮ್ನ ನಡೆಸಿರುವ ಪ್ರತಿ ಜೀವಿಗೆ ಇದರ ಜ್ಞಾನ ಅತ್ಯಾವಶ್ಯಕ. ಇ೦ದಿನ ಜ್ಞಾನಿಗಳ ಪ್ರಯತ್ನವೆಲ್ಲವೂ
ಇದಕ್ಕಾಗಿಯೇ ನಡೆದಿದೆ. ಈ ಮಹತ್ಕಾರ್ಯವನ್ನು ಸಾವಿರಾರು ವರ್ಷಗಳ ಹಿಂದೆಯೇ ತಮ್ಮ ಆತ್ಮಶಕ್ತಿಯಿಂದ ಸಾಧಿಸಿ,
ಜಯಗಳಿಸಿದ ಕೀರ್ತಿ ಭಾರತೀಯ ಮಹರ್ಷಿಗಳಿಗೆ ಸೇರಿದ್ದು, ಇದನ್ನು ಸುಲಲಿತವಾ ಮಾಡಿ ಸಮಾಜಕ್ಕೆ ಒದಗಿಸಿಕೊಟ್ಟ
ಘನತೆ , ರ್ಕಟಕ ಹರಿದಾಸರಿಗೆ ಸೇರಿದೆ. ಇದು ಹರಿದಾಸ ಸಾಹಿತ್ಯದ ವೈಶಿಷ್ಟ 8

ಮತ್ತೊಂದು ಹರಿಐಸ ಸಾತ್ಯದ ವೈಶಿಷ್ಟ ೫0ದರೆ, ಸಕಲ ತಾತ್ಮಿಕ ದೇವತಿಗಳ ಪರಿಚಯ ಮಾಸಿಕೊಡುವಿಕೆ.
ವೇದಗಳಲ್ಲಿ ವಿಷ್ಣು, ರುದ್ರ, ಬ್ರಹ್ಮ, ಇಂದ್ರ, ಎಯು, ಅಗ್ನಿ, ಸೂರ್ಯ, ಯಮ ಮೊದಲಾದ ಸಕಲ ತತ್ವಾಧಿಪತಿಗಳ
ವರ್ಣನೆ ಇದೆ. ಅಲ್ಲಿ ಆಯಾ ದೇವತೆಗಳ ಸ್ಥಾನ-ಮಾನ-ವ್ಯಾಪಾರ-ವ್ಯಾಪ್ತಿಗಳು ವರ್ಣಿತವಾಗಿವೆ. ಕಾಣದೇ ಇರುವ
ವೇದಗಳಿಗಿ ಸಂಬಂಧಿಸಿದ ಈ ದೇವತೆಗಳ ಅವತಾರ ಚರಿತ್ರೆಗಳು ಪುರಾಣಗಳಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಈ ರೀತಿ ಶ್ರುತಿ
ಪುರಾಣಗಳಲ್ಲಿ ಕಾಣಿಸಿಕೊಳ್ಳುವ ಎ್ಸ ದೇವತೆಗಳ ಮಹಾಮಹಿಮೆಯನ್ನು ಹರಿದಾಸರು ಹೃದಯಂಗಮವಾಗಿ ತಮ್ಮ
ಕೃತಿಗಳಲ್ಲಿ ಹಾಡಿರುವರು.

ವೈದಿಕ ಭೂಮಿಯೆಸಿದ ಭಾರತದಲ್ಲಿ ಒಂದು ವಿಚಿತ್ರವಾದ ಸನ್ನಿವೇಶವನ್ನು ಕಾಣಬಹುದು. ಶೈವ ಸಾಹಿತ್ಯದಲ್ಲಿ
ವೈಷ್ಣವ ದೇವತೆಗಳ ವರ್ಣನೆಯಾಗಲಿ, ಉಪಾಸನೆಯಾಗಲಿ ಕಂಡು ಬರುವುದಿಲ್ಲ. ಅರ್ಥಾತ್‌ ಅಲ್ಲಿ ವಿಷ್ಣು ಲಕ್ಷ್ಮೀ,
ವಾಯು, ಗರುಡ, ಶೇಷ ಮುಂತಾದವರ ಉಪಾಸನೆಗೆ ಸ್ಥಾನವಿಲ್ಲ. ಇದನ್ನು ಸ್ಪಷ್ಟವಾಗಿ ವೀರಶೈವ ವಚನ ಸಾಹಿತ್ಯದಲ್ಲಿ
ಕಾಣಬಹುದು. ಇದರಂತೆ ಶ್ರೀ ವೈಷ್ಣವ ಸಾಹಿತ್ಯದಲ್ಲಿ ಶೈವ ಸಂಬಂಧಿ ದೇವತೆಗಳಿಗೆ ಸ್ಥಾನ-ಮಾನಗಳಿರುವುದಿಲ್ಲ.
ಇಲ್ಲಿ ರುದ್ರ, ಪಾರ್ವತಿ, ವಿನಾಯಕ ಮುಂತಾದವರ ವರ್ಣನೆ ಕಂಡುಬರುವುದಿಲ್ಲ. ತಾಳ್ಮಪಾಕ ಅನ್ನಮಾಚಾರ್ಯರ
ಕೃತಿಗಳಲ್ಲಿ ಈ ಪರಿಸ್ಥಿತಿಯನ್ನು ಕಾಣಬಹುದು. ಕರ್ನಾಟಕ ಹರಿದಾಸರು ಮಾತ್ರ ತಾವು ನಂಬಿದ ದಾರಿಯಲ್ಲಿ ಸಕಲ
ತಾತ್ವಿಕ ದೇವತೆಗಳನ್ನೂ ಸ್ತುತಿಸಿರುವರು. ದ್ವೆ ೂತಮತಾವಲಂಬಿಗಳಾದ ಹರಿದಾಸರು ವಿಷ್ಣುವನ್ನೇ ಸರ್ವೋತ್ತಮನನ್ನಾಗಿ
ಅ೦ಂಗೀಕರಿಸಿದರೂ, ಉಳಿದ ಎಲ್ಲಾ ದೇವತೆಗಳನ್ನು ತಾರತಮ್ಯೋಕ್ತ ರೀತಿಯಲ್ಲಿ ಅನನ್ಯ ಸಾಮಾನ್ಯವಾಗಿ ನುತುಸಿರುವರು.
ಶ್ರುತಿ, ಸ್ಮೃತಿ, ಪುರಾಣ ಪ್ರತಿಪಾದ್ಯರಾದ ದೇವತೆಗಳನ್ನು ಅದೇ ಪಂಥದಲ್ಲಿ ವರ್ಣಿಸುತ್ತಾ ಅವರ ಸ್ಪರೂಪ-ಅಂಶ-
ಆವೇಶ-ಅವತಾರಾದಿಗಳನ್ನೂ- ವ್ಯಾಪಾರ- ವ್ಯಾಪ್ತಿಗಳನ್ನೂ ಕೂಲಂಕುಷವಾಗಿ ವರ್ಣಿಸಿರುವರು ಇದು ಹರಿದಾಸ
ಸಾಹಿತ್ಯದ ವೈಶಿಷ್ಟ್ಯ

ಇನ್ನು ಎಲ್ಲ ಪ್ರಾಂತದ ಸಾಧು-ಸಂತರು ಹಾಡಿ ಹೇಳಿದಂತೆ, ಹರಿದಾಸರು ಸಹ ಲೋಕ ಸಾಮಾನ್ಯವಾದ ನೀತಿ
ಮಾರ್ಗವನ್ನು, ಧರ್ಮ ಸಂದೇಶವನ್ನು ಪೂರ್ಣವಾಗಿ ಹೇಳಿದ್ದಾರೆ. ಸಮಾಜದಲ್ಲಿರುವ ಲೋಪ-ದೋಹಷಗಳನ್ನು
ಕನ್ನಡದ ಸರ್ವಜ್ಞ ಕವಿಯಂತೆ, ತೆಲುಗಿನ ವೇಮನನಂತೆ ನಿಶಿತವಾದ ತಮ್ಮ ಕೃತಿ ಖಡ್ಗಗಳಿಂದ ಕತ್ತರಿಸುವರು. ಒಟ್ಟಿನಲ್ಲಿ
ಹರಿದಾಸರು, ನೀತಿಯ ನುಡಿಗಟ್ಟಿನಿಂದ ಹಿಡಿದು, ಕೈವಲ್ಯ ಪ್ರಾಪ್ತಿಯವರೆಗಿನ ಎಲ್ಲ ವಿಧದ ಸಮಾಜೋಪಯುಕ್ತ
ಭಾವನಾ ತರಂಗಗಳನ್ನು, ತಮ್ಮ ಕೃತಿಗಳಲ್ಲಿ ಸ್ಪಷ್ಟಪಡುಸಿರುವರು. ಹರಿದಾಸರು ಹೇಳದ ಸಮಾಜೋಪಯುಕ್ತ
ವಿಷಯವಿಲ್ಲವೆಂದಲ್ಲಿ ತಪ್ಪಾಗಲಾರದು