ದಾಸಸಾಹಿತ್ಯ ಅಪೂರ್ವ ಸಾಹಿತ್ಯ. ವೇದಗಳ ನಿಜಾರ್ಥವನ್ನು ತಿಳಿಯ ಹೇಳಲು ಹೊರಹೊರಟ ಸ್ಮತಿ-
ಷುರಾಣ. ಧರ್ಮಶಾಸ್ತ್ರ ತಂತ್ರಶಾಸ್ತ್ರ ವೇದಾಂತಗ್ರಂಧಗಳ ಅಪೂರ್ವ ರಹಸ್ಯ ವಿಷಯಗಳನ್ನು ಜನ ಸಾಮಾನ್ಯಕ್ಕೆ
ಸುಲಲಿತವಾಗಿ ಕನ್ನಡ ಭಾಷೆಯಲ್ಲಿ ದೊರೆಯುವಂತೆ ಮಾಡಿದ ಘನತೆ ಈ ಕನ್ನಡ ಹರಿದಾಸಸಾಹಿತ್ಯಕ್ಕೆ ಮೀಸಲಾದುದು.
ಉಪನಿಷತ್ತುಗಳಳ, ಪುರಾಣಗಳ ವರರಹಸ್ಯಗಳನ್ನು ತಿಳಿಹೇಳುವಲ್ಲಿ ಹರಿದಾಸರ ಪ್ರಯತ್ನ ಪೂರ್ಣಫಲಕಾರಿಯಾಗಿದೆ.
ಹರಿದಾಸರ ಕೃತಿಗಳು ಉಪನಿಷತ್ತುಗಳ ಭಾಷಾ೦ತರಗಳು ಎಂದಲ್ಲಿ ತಪ್ಪಾಗಲಾರದು. ಹರಿದಾಸರು ತಮ್ಮ ಕೃತಿಗಳಲ್ಲಿ
ಒಂದು ಉಪನಿಷತ್ತನ್ನೋ ಅಥವಾ ಉಪನಿಷತ್ತಿನಭಾಗವನ್ನು ಪೂರ್ಣವಾಗಿ ಅನುಸರಿಸಿರುವುದನ್ನು ಕಾಣಬಹುದು.
“ದ್ವಾಸುಪರ್ಣಸಯುಜಾಸಖಾಯೌ” ಎಂಬ ಶೃತಿಯನ್ನು ಪುರಂದರದಾಸರು ತಮ್ಮ “ಜಯವದೆಜಯವದೆ ಈಮನೆತನಕೆ
ಬಿಡುಬಿಡುಬಿಡುಬಿಡು ಮನಸಂಶಯವ” ಎಂಬ ಜಾನಪದ ಶೈಲಿಯ ಹಾಡಿನಲ್ಲಿ ಪೂರ್ಣವಾಗಿ ಅನುವಾದಿಸಿರುವರು.
ದಾಸರು ಜಾನಪದ ಶೈಲಿಯಲ್ಲಿ ಶೃತಿ ರಹಸ್ಯವನ್ನು ಹೇಳಿ ಶ್ರೀಸಾಮಾನ್ಯರಿಗು ಶೃತ್ಯರ್ಥವನ್ನು ತಿಳಿಸಿರುವರು. ಒಳ್ಳೆ
ಶಬ್ಧಾಡಂಬರದಲ್ಲಿ ಸಂಗೀತ ಶೈಲಿಯಲ್ಲಿ ದಾಸರು ಈ ಕೃತಿಯನ್ನು ರಚಿಸಿದ್ದರೇ ಅದು ಕೇವಲ ಸಂಗೀತಗಾರರ ಪಂಡಿತರ
ಸ್ಫೋತ್ರಾಗುತಿತ್ತು.
ಒಟ್ಟಿನಲ್ಲಿ ಹರಿದಾಸರು ಸೃಷ್‌ಒಇರಹಸ್ಯದಿಂದ ಹಿಡಿದು ಲೋಕನೀತಿಯವರೆಗಿರುವ ಎಲ್ಲಾ ವಿಷಯಗಳನ್ನು
ತಮ್ಮ ಕೃತಿಗಳಲ್ಲಿ ಹೇಳಿರುವಂತೆ ಹರಿದಾಸರು ಹೇಳಿದ ವಿಷಯಗಳಲ್ಲ ಎಂದಲ್ಲಿ ತಪ್ಪಾಗಲಾರದು. ತೆಲುಗು, ತಮಿಳು
ವಾಗ್ಗೇಯಕಾರರ ಸಾಹಿತ್ಯದಲ್ಲಿ ಈ ವೈಭವವನ್ನು ವಿಷಯಪ್ರತಿಪಾದನ ವೈಶಾಲ್ಯವನ್ನು ಕಾಣಲು ಸಾಧ್ಯವೇಯಿಲ್ಲ.
ಎಲ್ಲಾ ಪ್ರಾಂತದ ವಾಗ್ಗೇಯಕಾರರು ಜ್ಞಾನಿಗಳೇ. ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸದವರೆ. ಶೃತಿ-ಸ್ಮೃತಿ-ಪುರಾಣ
ತಂತ್ರಶಾಸ್ತ್ರಗಳ ಆಳಕ್ಕೆ ಮಾತ್ರ ಓದವರಲ್ಲ. ವೈದಿಕ, ಲೌಕಿಕ ಸಂಸ್ಕೃತ ಭಾಷೆಯಲ್ಲಿ ನಿಗೂಢವಾಗಿದ್ದ ಆಧ್ಯಾತ್ಮ
ಪ್ರಪಂಚವನ್ನು ಶ್ರೀಸಾಮಾನ್ಯರ ಜ್ಞಾನಾ೦ಗಳಕ್ಕೆ ಒಯ್ದ ಪುಣ್ಯಾತ್ಮರುಹರಿದಾಸರು.
1) ಸಮಗಸೃಷ್ಠಿ ರಹಸ್ಯಕ್ಕೆ ಸಂಬಂಧಿಸಿದ ಕೃತಿಗಳು
2) ಉಪನಿಷದರ್ಥ ಪ್ರತಿಪಾದಕ ಕೃತಿಗಳು
3) ಪುರಾಣ ಕಥಾನಿರೂಪಣ ಕೃತಿಗಳು
4) ತ್ರಂತ್ರಗಥದ ವಿಷಯ ನಿರೂಪಣ ಕೃತಿಗಳು
(ಚಕ್ರಾಬ್ಬಮಂಡಲ, ಪೂಜಾಪದ್ಧತಿ, ಮಂತ್ರಗಳಸ್ವರೂಪ, ಓಂಕಾರ ವೈಭವ ಮುಂತಾದವುಗಳು)
5) ಉಪಾಸನ ವಿಷಯಕ ಕೃತಿಗಳು
6) ಪ್ರಮೇಯ ವಿಷಯಕ ಕೃತಿಗಳು
7) ಸಾಧನಾಭಾಗ ವಿಷಯಕ ಕೃತಿಗಳು
8) ತೀರ್ಥಕ್ಷೇತ್ರ ವಿಷಯಕ ಕೃತಿಗಳು
9) ಶ್ರೀನಿವಾಸನ ಸ್ತೋತ್ರಾತ್ಮಕ ಕೃತಿಗಳು
10) ಕೃಷ್ಣ ಕಥಾ ಸ್ತೋತ್ರಾತ್ಕಕ ಕೃತಿಗಳು
11) ರಾಮ ಸ್ತೋತ್ರಾತ್ಕಕ ಕೃತಿಗಳು
12) ಹರಿಯ ದಶಾವತಾರ ಸ್ತೋತ್ರಾತ್ಮಕ ಕೃತಿಗಳು
13) ನರಸಿಂಹ ಸ್ತೋತ್ರಾತ್ಕಕ ಕೃತಿಗಳು
14) ಹಯಗ್ರೀವಾದಿ ಭಗವದವತಾರಗಳ ಸ್ತೋತ್ರಾತ್ಕಕ ಕೃತಿಗಳು
15) ಮಹಾಲಕ್ಷ್ಮ್ಮೀಸ್ತೋತ್ರಾತ್ಕಕ ಕೃತಿಗಳು
16) ಹನುಮಂತದೇವರ ( ವಾಯುದೇವರ) ಸ್ತೋತ್ರಾತ್ಮಕ ಕೃತಿಗಳು
17) ರುದ್ರದೇವರ ಸ್ತೋತ್ರಾತ್ಮಕ ಕೃತಿಗಳು
18) ಇತರ ದೇವತಾ ಸ್ತೋತ್ರಾತ್ಮಕ ಕೃತಿಗಳು
19) ರಾಘವೇ೦ಂದ್ರಗುರುಗಳ ಸ್ತೋತ್ರಾತ್ಮಕ ಕೃತಿಗಳು
20) ಇತರ ಗುರುಗಳ ಸ್ತೋತ್ರಾತ್ಮಕ ಕೃತಿಗಳು
21) ಹರಿದಾಸರ ಸ್ತೋತ್ರಾತ್ಮಕ ಕೃತಿಗಳು
22) ದುರ್ಜನ ಸಂಘ ವಿಷಯಕ ಕೃತಿಗಳು
23) ಸಜ್ಜನರ ಸಂಘ ವಿಷಯಕ ಕೃತಿಗಳು
24) ಹರಿನಾಮ ಮಹಿಮಾವರ್ಣನ ಕೃತಿಗಳು
25) ಕಲಿಯುಗ ಮಹಿಮಾವರ್ಣನ ಕೃತಿಗಳು
26) ಲೋಕನೀತಿ ವಿಷಯದ ಕೃತಿಗಳು
27) ತೀರತಮ್ಯ ಪ್ರತಿಪಾದಕ ಕೃತಿಗಳು
28) ನಳಚರಿತೆ ಶಂಕುತಲೋಪಾಖ್ಯಾನಾದಿ ಬಹುತ್ಯುತಿಗಳು (ಖಂಡಕಾವ್ಯಗಳು)
29) ಖಕ್ಕಾಂಗದ ಚರ್ರ ಮುಂತಾದ ಬಯಲು ನಾಟಕಗಳು