Skip to content Skip to footer

About us | ದಾಸಸಾಹಿತ್ಯ ಪ್ರಾಜೆಕ್ಟ್ ಬಗ್ಗೆ

 

Change Language  english 
ಪ್ರಾಜೆಕ್ಟ್‌ ಹೆಮ್ಮರವಾಗಿ ಬೆಳೆದುನಿಂತಿದೆ

ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯಾ ಪ್ರಾಜೆಕ್ಟ್‌

ಶ್ರೀನಿವಾಸನ ಕರುಣೆಯ ಕಂದಮ್ಮರೆನಿಸಿದ ಶ್ರೀರಾಘವೇಂದ್ರಗುರುಸಾರ್ವಭೌಮರು,ತಮ್ಮ ಪ್ರತಿಬಿಂಬರೆನಿಸಿದ ಶ್ರೀಸುಬುಧೇಂದ್ರತೀರ್ಥಶ್ರೀಪಾದರಿಗೆ ಪ್ರೇರಣೆನೀಡಿ, ಅವರದ್ವಾರಾ ಹಿಂದೂಧರ್ಮಕ್ಕೆ ತಂಪನ್ನುಂಟುಮಾಡಲು, ಅದನ್ನು ಬೆಳಿಸಿ, ಸರ್ವತ್ರಬೆಳಗುವಂತೆ ಮಾಡಲು, ಗುರುಸಾರ್ವಭೌಮದಾಸಸಾಹಿತ್ಯಾಪ್ರಾಜೆಕ್ಟಿಗೆ ಭೀಜಾವಾಪ ಮಾಡಿಸಿದರು.

ಕೇವಲ ಐದು ವರ್ಷಗಳಲ್ಲಿ ಪ್ರಾಜೆಕ್ಟ್‌ ಹೆಮ್ಮರವಾಗಿ ಬೆಳೆದುನಿಂತಿದೆ.

DASASAHITYA MUSEUM

Photo Panaroma

Dasa Sahitya

Dasasahitya Chronicles: Activities & Attractions

Activities of the Project Office

॥ ಪ್ರಾಜೆಕ್ಟಿನ ಆಶಯಗಳು ॥

  • ಭಾಷಾಪ್ರಾಂತರಗಳಭೇದವಿಲ್ಲದೆ ಸಮಾಜವನ್ನು ಒಗ್ಗೂಡಿಸಲುದೇಶಾದ್ಯಂತ ಭಜನಾಮಂಡಲಿಗಳ ಸ್ಥಾಪನೆ.
  • ಭಜನಾಮಂಡಲಿಗಳಿಗೆ ಭಾರತೀಯತೆಯ ಬಗ್ಗೆ. ದಾಸಸಾಹಿತ್ಯದ ಬಗ್ಗೆ. ಅಭಿರುಚಿ-ತಿಳುವಳಿಕೆಗಳನ್ನುಂಟು
    ಮಾಡಲು, ಮಂತ್ರಾಲಯದಲ್ಲೇ ಮೂರು ದಿನಗಳಿಗೆ ಸೀಮಿತವಾದ ಶಿಕ್ಷಣಾಶಿಭಿರಗಳನ್ನು ನಿರ್ವಹಿಸುವುದು.
  • ವಿವಿಧ-ಕ್ಷೇತ್ರಗಳಲ್ಲಿ ಭಜನಾಮ೦ಡಲಿಗಳ ಸಂಘಟನಾಕಾರ್ಯಕ್ರಮಗಳ ನಿರ್ವಹಣೆ.
  • ದಾಸರ ಆರಾಧನೆಗಳ ನಿರ್ವಹಣೆ.
  • ಹರಿಕಥಾಮೃತಸಾರಗ್ರಂಥದಸಾಮೂಹಿಕ ಪಾರಾಯಣ. 32 ಸಂಧಿಗಳನ್ನು ಕಂಠಸ್ಥಒಪ್ಪಿಸಿದ ವ್ಯಕ್ತಿಗೆ, 32
    ಸಾವಿರರೂಪಾಯಿಗಳನ್ನು ಕೊಟ್ಟು ಸತ್ಕರಿಸಿ, ಪ್ರೋತ್ಸಹಿಸುವುದು.
  • ಲಕ್ಷ್ಮೀಶೋಭನೆ, ಲಕ್ಷ್ಮೀಹೃದಯಗಳ ಸಾಮೂಹಿಕಪಾರಾಯಣ.
  • ತಿರುಮಲೆ-ಅಹೋಬಿಲ-ಮುಂತಾದಪ್ರಸಿದ್ಧಕೇತ್ರಗಳಲ್ಲಿ ಮೆಟ್ಟೋತ್ಪವಗಳ ನಿರ್ವಹಣೆ.
  • ದಾಸಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು, ಕನ್ನಡ-ತೆಲುಗು-ಹಿಂದಿ-ಆಂಗ್ಲಭಾಷೆಗಳಲ್ಲಿ ಪುಸ್ತಕರೂಪ ದಲ್ಲಿಮುದ್ರಿಸಿ, ಕಡಿಮೆಬೆಲೆಗೆ ಮಾರಾಟ ಮಾಡುವುದು.
  • ಶ್ರೀಮಠದವೆಬ್‌ಸೈಟ್‌ದ್ಹಾರಾ ದಾಸಸಾಹಿತ್ಯದ ಬಗ್ಗೆ ಪಾಠ-ಪ್ರವಚನಗಳನ್ನು ಏರ್ಪಡಿಸುವುದು, ಚಿತ್ರಗಳ ದ್ದಾರಾ ದಾಸಸಾಹಿತ್ಯವನ್ನು ಬೋಧಿಸುವುದು, ಸಂಪ್ರದಾಯಬದ್ಧವಾಗಿ ದಾಸರಕೃತಿಗಳನ್ನು, ಶುದ್ಧಪಾಠದೊಟ್ಟಿಗೆ ಹೇಳಿ ಕೊಡುವುದು.
  • ದಾಸಸಾಹಿತ್ಯದ ಬಗ್ಗೆ ಬೇಸಿಗೆ ಶಿಬಿರಗಳನ್ನು ಏರ್ಪಡಿಸುವುದು.
  • ವರ್ಷಕ್ಕೆ ಎರಡರಂತೆ, ದಾಸಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗೋಷ್ಟಿಗಳನ್ನು ನಿರ್ವಹಿಸುವುದು.
  • ಆಂಧ್ರ-ಕರ್ನಾಟಕಪ್ರಾಂತಗಳಿಗೆ ಸಂಬಂಧಿಸಿದ ಹರಿಕಥಾದಾಸರ ಸಮ್ಮೇಳನಗಳನ್ನು, ಮಂತ್ರಾಲಯದಲ್ಲಿ
    ವರ್ಷಕ್ಕೆ ಎರಡುಬಾರಿ ನಿರ್ವಹಿಸುತ್ತಾ, ಹರಿಕಥಾದಾಸರಿಗೆ ಪ್ರೋತ್ಸಾಹ ನೀಡುವುದು.

Rayare Gatiyu Namage
ರಾಯರೇ ಗತಿಯು ನಮಗೆ

Address

T +91-08512-279459 / 28
E: info@sgsdsp.org

SGSDSP, SRS Matha,
Mantralayam, Adoni(Dt),
Kurnool District, Andhra Pradesh, INDIA

SRS Web Team © 2024. All Rights Reserved.